ಹಾವೇರಿ ಲೋಕಸಭಾ ಕ್ಷೇತ್ರ ಇರಬಹುದು ಅಥವಾ ಬೇರೆ ಲೋಕಸಭಾ ಕ್ಷೇತ್ರ ಇರಬಹುದು ಅಲ್ಲಿ ಹಾಲಿ ಸಂಸದರನ್ನೇ ಮುಂದುವರೆಸುವ ಅಗತ್ಯವಿಲ್ಲ ಎಂದು ಕೆ ಎಸ್ ಈಶ್ವರಪ್ಪ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಹಾವೇರಿಯಲ್ಲಿ ಕುಟುಂಬ ಸಮೇತರಾಗಿ ರುದ್ರ ಹೋಮದಲ್ಲಿ ಭಾಗವಹಿಸಿರುವ ಅವರು, ಪರೋಕ್ಷವಾಗಿ ಹಾವೇರಿ ಲೋಕಸಭಾ ಕ್ಷೇತ್ರದ ಮೇಲೆ ದೃಷ್ಟಿ ನೆಟ್ಟಿರುವ ಬಗ್ಗೆ ಸಂದೇಶ ರವಾನಿಸಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಮಾಡುವದು ಪಕ್ಷದ ಹೈಕಮಾಂಡಗೆ ಬಿಟ್ಟ ವಿಚಾರ ಎಂದು ಹೇಳಿರುವ ಕೆ ಎಸ್ ಈಶ್ವರಪ್ಪ, ತಮ್ಮ ಮಗ ಕಾಂತೇಶರನ್ನು ಅಭ್ಯರ್ಥಿ ಮಾಡಲು ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ
Author: Karnataka Files
Post Views: 1





