Download Our App

Follow us

Home » ಭಾರತ » ಧಾರವಾಡದ ಕಡೆಗೆ ಬರುತ್ತಿರುವ ಭಿಕ್ಷುಕರು, ಮಾನಸಿಕ ಅಸ್ವಸ್ಥರು…. ಭಿಕ್ಷುಕರನ್ನು, ಮಾನಸಿಕ ಅಸ್ವಸ್ಥರನ್ನು ಹೊರಗಟ್ಟುತ್ತಿರುವ ಮಹಾರಾಷ್ಟ್ರ.

ಧಾರವಾಡದ ಕಡೆಗೆ ಬರುತ್ತಿರುವ ಭಿಕ್ಷುಕರು, ಮಾನಸಿಕ ಅಸ್ವಸ್ಥರು…. ಭಿಕ್ಷುಕರನ್ನು, ಮಾನಸಿಕ ಅಸ್ವಸ್ಥರನ್ನು ಹೊರಗಟ್ಟುತ್ತಿರುವ ಮಹಾರಾಷ್ಟ್ರ.

ಶೈಕ್ಷಣಿಕ ಕಾಶಿ ಧಾರವಾಡದಲ್ಲಿ ಭಿಕ್ಷಾಟನೆ ಹೆಚ್ಚಾಗಿದೆ. ಭಿಕ್ಷುಕರ ಜೊತೆ ಜೊತೆಗೆ ಮಾನಸಿಕ ಅಸ್ವಸ್ಥರು ದಾರಿಯುದ್ಧಕ್ಕೂ ಕಂಡು ಬರುತ್ತಿದ್ದಾರೆ.

ಮಾರ್ಚ್, 2023 ರಂದು ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದ್ದ ಜಿ 20 ಶೃಂಗ ಸಭೆಯ ಹಿನ್ನೇಲೆಯಲ್ಲಿ ಭಿಕ್ಷಾಟನೆ ಮೇಲೆ ನಿಷೇಧ ಹೇರಿ ಅವರನ್ನು ಹೊರದಬ್ಬಿತ್ತು. ಹಾಗೇ ಹೊರಬಿದ್ದವರು ಕರ್ನಾಟಕದತ್ತ ಬರುತ್ತಿದ್ದಾರೆ. , ಮಹಾರಾಷ್ಟ್ರದವರು, ಭಿಕ್ಷುಕರನ್ನು ಬಲವಂತವಾಗಿ ಕರ್ನಾಟಕದ ಗಡಿಯೊಳಗೆ ಕಳಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೆಲವರು ಭಿಕ್ಷಾಟನೆಯ ನೆಪದಲ್ಲಿ ಕಳ್ಳತನ ಪ್ರಕರಣದಲ್ಲಿಯೂ ಭಾಗಿಯಾಗುತ್ತಾರೆ.

ಸಧ್ಯ ಧಾರವಾಡದಲ್ಲಿ ಅನ್ಯ ಭಾಷಿಕ ಭಿಕ್ಷುಕರು ಮತ್ತು ಮಾನಸಿಕ ಅಸ್ವಸ್ಥರು ಕಂಡು ಬರುತ್ತಿದ್ದು, ಕಾರಲ್ಲಿ ಕುಳಿತವರಿಗೆ ತೊಂದರೆ ಕೊಡುತ್ತ, ಕಾರಿನ ಬಾಗಿಲು ತೆಗೆದು ಒಳಗೆ ಕುಳಿತುಕೊಳ್ಳುವ, ದಾರಿ ಹೋಕರಿಗೆ ಕಿರಿಕಿರಿ ಮಾಡುವ ಘಟನೆಗಳು ನಡೆದಿವೆ.

ಧಾರವಾಡದಲ್ಲಿ “ಡಿಮಾನ್ಸ್” ಮಾನಸಿಕ ಆಸ್ಪತ್ರೆ, ರಾಯಾಪುರದಲ್ಲಿ ಭಿಕ್ಷುಕರ ಪುನರವಸತಿ ಕೇಂದ್ರ ಇದ್ದು. ಅಲ್ಲಿಯೂ ಸಹ ಭಿಕ್ಷುಕರು ತುಂಬಿದ್ದಾರೆ. ಕಳೆದೊಂದು ತಿಂಗಳಿನಿಂದ ಧಾರವಾಡದಲ್ಲಿ ಭಿಕ್ಷುಕರ ಸಂಖ್ಯೆ ಮತ್ತು ಮಾನಸಿಕ ಅಸ್ವಸ್ಥರ ಸಂಖ್ಯೆ ಹೆಚ್ಚಾಗಿರುವದು ಆತಂಕಕ್ಕೆ ಕಾರಣವಾಗಿದೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಬೃಹತ್ ಪ್ರತಿಭಟನೆ ಇನ್ ಸೈಡ್ ಸ್ಟೋರಿ. ಓದಲೇಬೇಕಾದ ಸ್ಟೋರಿ.

ಪೊಲೀಸ್ ಪೇದೆ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಧಾರವಾಡದಲ್ಲಿ ವಿವಿಧ ಸಂಘಟನೆಗಳು ಕರೆ ಕೊಟ್ಟಿರುವ ಧಾರವಾಡ ಚಲೋ ಬೃಹತ್ ಪ್ರತಿಭಟನೆ ನಡೆಯಲಿದೆ. ಧಾರವಾಡ ವಿದ್ಯಾಕಾಶಿ ಎಂದು

Live Cricket

error: Content is protected !!