ಹಿರಿಯ ಶಾಸಕ ಬಸವರಾಜ ರಾಯರೆಡ್ಡಿಯವರ ಧಾರವಾಡದ ಮಮತಾ ಫಾರ್ಮ್ ಹೌಸ್ ಸುದ್ದಿಯಲ್ಲಿದೆ. ಇತ್ತೀಚಿಗೆ ರಾಜ್ಯ ಸರ್ಕಾರದ ಆಡಳಿತ, ಸಚಿವರ ಕಾರ್ಯವೈಖರಿ ಕುರಿತು ಬಸವರಾಜ ರಾಯರೆಡ್ಡಿಯವರು ಅಸಮಾಧಾನ ವ್ಯಕ್ತಪಡಿಸಿದ್ದರು. ರಾಯರೆಡ್ಡಿಯವರ ಅಸಮಾಧಾನ ಕುರಿತು, ಅನೇಕ ಸಚಿವರುಗಳು ಪ್ರತಿಕ್ರಿಯಿಸಿ, ರಾಯರೆಡ್ಡಿಯವರ ಜೊತೆ ಮಾತನಾಡುವದಾಗಿ ತಿಳಿಸಿದ್ದರು. ಇದರ ಬೆನ್ನಲ್ಲೇ ಇದೀಗ ಇಬ್ಬರು ಮಂತ್ರಿಗಳು, ರಾಯರೆಡ್ಡಿಯವರ ಧಾರವಾಡದ ಮಮತಾ ಫಾರ್ಮ್ ಹೌಸ್ ಗೆ ಪ್ರತ್ತೈಕವಾಗಿ ಭೇಟಿ ನೀಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಎಮ್ ಸಿ ಸುಧಾಕರ ಇಂದು ಫಾರ್ಮ್ ಹೌಸ್ ನಲ್ಲಿ ವಾಸ್ತವ್ಯ ಮಾಡಲಿದ್ದು, ನಾಳೆ ಬೆಳಿಗ್ಗೆ 9 ಘಂಟೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಭೇಟಿ ನೀಡಲಿದ್ದಾರೆ. ಈ ಭೇಟಿ ರಾಜಕೀಯವಾಗಿ ಸುದ್ದಿ ಮಾಡಿದ್ದು, ಸಮಾಧಾನದ ಭೇಟಿಯೋ, ಸಲಹೆ ಪಡೆಯುವ ಭೇಟಿಯೋ ಅನ್ನೋದು ತಿಳಿಯಬೇಕಾಗಿದೆ.
Author: Karnataka Files
Post Views: 4





