ರೈತ ವಿರೋಧಿಯಾಗಿರುವ ಕಾಂಗ್ರೇಸ್ ಸರ್ಕಾರ 5 ವರ್ಷ ಪೂರೈಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ. ಕಾಂಗ್ರೇಸ್ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಬರ ಬಿದ್ದಿದ್ದು, ಬರ ಬಿದ್ದ ತಾಲೂಕುಗಳನ್ನು ಇನ್ನೂವರೆಗೆ ಬರಪೀಡಿತ ತಾಲೂಕು ಎಂದು ಘೋಷಿಸಿಲ್ಲ ಎಂದು ಕಿಡಿಕಾರಿದರು. ಒಬ್ಬರ ಮೇಲೆ ಒಬ್ಬರಂತೆ ಕಾಂಗ್ರೇಸ್ಸಿನವರು ಸನಾತನ ಧರ್ಮದ ಅವಹೇಳನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿನ್ನೇ ಹಾವೇರಿಯಲ್ಲಿ ರೈತರ ಆತ್ಮಹತ್ಯೆ ಕುರಿತಂತೆ ರೈತ ಕುಲಕ್ಕೆ ಸಚಿವ ಶಿವಾನಂದ ಪಾಟೀಲ್ ಅವಮಾನ ಮಾಡಿದ್ದಾರೆ. ಇವರಿಗೆಲ್ಲ ಮಾಡಲು ಬೇರೆ ಕೆಲಸವಿಲ್ಲ ಎಂದು ಹೇಳಿದರು. ಇದೊಂದು ಲಾಟರಿ ಸರ್ಕಾರ, ಲಾಟರಿ ಸರ್ಕಾರದಲ್ಲಿ ಮಂತ್ರಿಗಳು, ಶಾಸಕರು ಲಾಟರಿಯಲ್ಲಿ ಆಯ್ಕೆಯಾಗಿದ್ದಾರೆ. ನಮಗೆ ಸಿದ್ದರಾಮಯ್ಯ ಸರ್ಕಾರ ಉರುಳಿಸುವ ಯಾವದೇ ಯೋಚನೆ ಇಲ್ಲ ಎಂದು ರಾಮುಲು ಸ್ಪಷ್ಟಪಡಿಸಿದರು. ಈ ಬಾರಿಯೂ ನರೇಂದ್ರ ಮೋದಿಯವರು ಪ್ರಧಾನಿಯಾಗ್ತಾರೆ ಎಂದು ಭವಿಷ್ಯ ನುಡಿದರು.
Author: Karnataka Files
Post Views: 5





