ಸನಾತನ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್ ಹೇಳಿದ ಮಾತು ದೇಶವ್ಯಾಪಿ ಚರ್ಚೆಯಾಗುತ್ತಿದ್ದರೆ, ಮತ್ತೊಂದೆಡೆ ಹಿಂದೂ ಧರ್ಮದ ಬಗ್ಗೆ ಗೃಹಮಂತ್ರಿ ನೀಡಿದ ಹೇಳಿಕೆ ಕಿಡಿ ಹೊತ್ತಿಸಿದೆ. ಕೊರಟಗೆರೆಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಮುಗಿಸಿ ಮಾತನಾಡಿದ ಜಿ ಪರಮೇಶ್ವರ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ.
ಹಿಂದೂ ಧರ್ಮ ಹುಟ್ಟಿದ್ದು ಯಾವಾಗ, ಅದನ್ನು ಹುಟ್ಟಿಸಿದವರು ಯಾರು ಎಂಬುದು ನನಗೆ ಇನ್ನು ಕಾಡುತ್ತಿದೆ ಎಂದು ಹೇಳಿದ್ದಾರೆ. ಜಗತ್ತಿನಲ್ಲಿ ಅನೇಕ ಧರ್ಮಗಳು ಹುಟ್ಟಿಕೊಂಡಿವೆ. ಭಾರತದಲ್ಲಿ ಬೌದ್ದ ಹಾಗೂ ಜೈನ ಧರ್ಮಗಳು ಹುಟ್ಟಿಕೊಂಡಿವೆ. ಇಸ್ಲಾಂ ಮತ್ತು ಕ್ರೈಸ್ತ್ ಧರ್ಮಗಳು ಹೊರಗಿನಿಂದ ಬಂದಿವೆ ಎಂದು ಪರಮೇಶ್ವರ ಹೇಳಿದ್ದಾರೆ.
Author: Karnataka Files
Post Views: 1





