ಒಂದು ಕಾಲಕ್ಕೆ ಬಿಜೆಪಿಯ ಭದ್ರಕೋಟೆಯಾಗಿದ್ದ ಧಾರವಾಡ ಜಿಲ್ಲೆಯಲ್ಲಿ ಕಮಲ ಪಕ್ಷ ಕ್ರಮೇಣ ಸೊರಗುತ್ತಿದೆ. ಒಬ್ಬೊಬ್ಬ ನಾಯಕರು ಪಕ್ಷ ಬಿಡುತ್ತಿದ್ದು, ಬಿರುಕು ಸೃಷ್ಟಿಯಾಗಿದೆ. ಭಿನ್ನಮತ ಭುಗಿಲೆದ್ದಿದ್ದು, ನಾಯಕರ ಮೇಲೆ ಅಪಸ್ವರ ಕೇಳಿ ಬರುತ್ತಿವೆ.
ವೈಯುಕ್ತಿಕವಾಗಿ ನನಗೂ ಅಸಮಾಧಾನವಾಗಿದೆ ಎಂದು ಹೇಳಿರುವ ಧಾರವಾಡ ಗ್ರಾಮೀಣ ಶಾಸಕಿ ಸೀಮಾ ಮಸೂತಿ, ಹೊಸಬರನ್ನು ಪಕ್ಷಕ್ಕೆ ಕರೆದುಕೊಂಡು ಬಂದು ಹಳಬರನ್ನು ನಿರ್ಲಕ್ಷ ಮಾಡಬಾರದು ಎಂದು ಹೇಳಿದ್ದಾರೆ. ಜಗದೀಶ ಶೆಟ್ಟರ ಅವರ ಕಟ್ಟಾ ಅನುಯಾಯಿಯಾಗಿರುವ ಸೀಮಾ ಮಸೂತಿಯವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಬಿಜೆಪಿ ನಾಯಕರು ಹೆಣಗಾಡುತ್ತಿದ್ದಾರೆ ಎನ್ನಲಾಗಿದೆ. ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಪ್ರದೀಪ ಶೆಟ್ಟರ ಬಹಿರಂಗವಾಗಿಯೇ ಹೇಳಿದ್ದು, ಜಿಲ್ಲೆಯಲ್ಲಿ ಕೋಲಾಹಲ ಸೃಷ್ಟಿಸಿದೆ.
Author: Karnataka Files
Post Views: 1





