ಆಧುನಿಕತೆ ಬೆಳೆದಂತೆಲ್ಲ, ಅಪರಾಧಗಳ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿವೆ. ಆಕರ್ಷಕ ಆಫರ್ ಗಳಿಗಾಗಿ ಸೈಬರ್ ಕ್ರೈಮ್ ಗಳು ಹೆಚ್ಚುತ್ತಿವೆ. ಮೊಬೈಲ್ ಮೂಲಕ ಮೋಸದ ಜಾಲ ಬಿಸಲಾಗುತ್ತಿದೆ. ಮೋಸದ ಜಾಲಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ.
ಸೈಬರ್ ಕ್ರೈಮ್ ಖದಿಮರಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸರು ಸಿಂಹ ಸ್ವಪ್ನವಾಗಿದ್ದಾರೆ. ಬೇರೆ ಬೇರೆ ಯವರ ಆಧಾರ ಕಾರ್ಡ ಹೆಸರಲ್ಲಿ ಸೀಮ್ ಕಾರ್ಡ ಪಡೆದುಕೊಳ್ಳುವ ಕಿರಾತಕರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಹುಬ್ಬಳ್ಳಿ ಧಾರವಾಡ ಪೊಲೀಸರು ಟೊಂಕ ಕಟ್ಟಿ ನಿಂತಿದ್ದಾರೆ. ನಿಮ್ಮ ಹೆಸರಿನಲ್ಲಿ ಸಿಮ್ ಕಾರ್ಡ ಪಡೆದು ವಂಚಿಸುವ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿವೆ. ಇದಕ್ಕೆಂದೆ ಹುಬ್ಬಳ್ಳಿ ಧಾರವಾಡ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ನಿರತರಾಗಿದ್ದಾರೆ. ಹುಬ್ಬಳ್ಳಿ ಧಾರವಾಡ ಪೊಲೀಸರು ಅಂತದೇನು ಜಾಗೃತಿ ಮೂಡಿಸುತ್ತಿದ್ದಾರೆ ಮಾಡುತ್ತಿದ್ದಾರೆ ಅನ್ನೋ ಪ್ರಶ್ನೆ ನಿಮ್ಮದಾಗಿದ್ದಾರೆ ಈ ಕೆಳಗಿನ ಮಾಹಿತಿ ಪಡೆದುಕೊಳ್ಳಿ



Author: Karnataka Files
Post Views: 1





