ಬರಪೀಡಿತ ತಾಲೂಕಿನ ಬಗ್ಗೆ ವಿಪತ್ತು ನಿರ್ವಹಣೆ ಸಂಪುಟ ಉಪ ಸಮಿತಿ ನೀಡಿರುವ ಶಿಫಾರಸ್ಸಿನ ಅನ್ವಯ ಘೋಷಣೆಯಾದರೆ, ಉದ್ಯೋಗ ಖಾತ್ರಿ ಕಾಯ್ದೆಯಡಿ ಈಗಿರುವದಕ್ಕಿಂತ ಹೆಚ್ಚು ದಿನ ಉದ್ಯೋಗ ಕಲ್ಪಿಸಲಾಗುವದೆಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಸಧ್ಯ ಉದ್ಯೋಗ ಖಾತ್ರಿ ಕಾಯ್ದೆಯಡಿ ಪ್ರತಿಯೊಬ್ಬರಿಗೆ 100 ದಿನಗಳ ಕಾಲ ಉದ್ಯೋಗ ನೀಡಲಾಗುತ್ತಿದೆ. ಅದನ್ನು 150 ಕ್ಕೆ ಹೆಚ್ಚಿಸಲಾಗುವದೆಂದು ಖರ್ಗೆ ತಿಳಿಸಿದ್ದಾರೆ. ಸಧ್ಯ ಅಷ್ಟೇನು ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ ಎಂದ ಅವರು, ಪ್ರತಿ ಜಿಲ್ಲಾ ಪಂಚಾಯತಿಗಳಿಗೆ 1 ಕೋಟಿ ರೂಪಾಯಿ ನೀಡುತ್ತಿದೆ ಎಂದು ತಿಳಿಸಿದರು.
Author: Karnataka Files
Post Views: 1





