ಅತ್ಯಂತ ಸರಳ ಸಜ್ಜನಿಕೆಯ ಮಂತ್ರಿ ಎಂದೇ ಹೆಸರಾದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹುಬ್ಬಳ್ಳಿಯಲ್ಲಿಂದು ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಗತ್ತಿಗೆ ಶಾಂತಿ ಮತ್ತು ಕರುಣೆ ಭೋಧಿಸಿದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ನೀಡಿದ ಸಂದೇಶ ಇಡೀ ಮನುಕುಲಕ್ಕೆ ನೀಡಿದ ಸಂದೇಶವಾಗಿದೆ ಎಂದರು. ಮುಂದುವರೆದು ಮಾತನಾಡಿದ ಅವರು ನಬಿ ಕೆ ಬಿನ್ ನಜಾರಾ, ನಜಾರಾ ನಹಿ ಹೋತಾ,,, ರಾಮನು ನೀನೇ, ರಹೀಮನು ನೀನೇ, ಜಗದೊಡೆಯನು ನೀನೇ, ನಿನಗೀತಕೋ ಸ್ವಂತದ ಮನೆ ಎಂದು ಹೇಳುತ್ತಾ ಭಾವೈಕ್ಯತೆಯ ಸಂದೇಶ ಸಾರಿದರು. ಸಚಿವ ಸಂತೋಷ ಲಾಡ್ ಅದ್ಬುತ ಭಾಷಣ ಮಾಡಿ, ಗಮನ ಸೆಳೆದರು.
Author: Karnataka Files
Post Views: 5





