ಆಧುನಿಕತೆ ಬೆಳೆದಂಗೆಲ್ಲ, ಪಟ್ಟಣ ಪ್ರದೇಶಗಳಲ್ಲಿ ಜಾನಪದ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ಮಳೆ ಮತ್ತು ಉತ್ತಮ ಬೆಳೆ ಬರಲಿ ಎಂದು ಕೆಲವೆಡೆ ಜೋಕುಮಾರನನ್ನು ಪೂಜೆ ಮಾಡುವ ಸಂಪ್ರದಾಯ ಇನ್ನು ಚಾಲ್ತಿಯಲ್ಲಿರುವದು ಖುಷಿ ತರುವ ಸಂಗತಿ. ಗದಗ ಜಿಲ್ಲೆಯ ನರೇಗಲ್ ಪಟ್ಟಣದಲ್ಲಿ ಇಂದು ಬಾರಕೇರ ಮನೆತನದ ಹೆಣ್ಮಕ್ಳಳು ಜೋಕುಮಾರನ ಪೂಜೆ ಮಾಡಿ, ಪ್ರಾರ್ಥಿಸಿದರು.
ಪ್ರತಿ ವರ್ಷ ಗಣೇಶ ಮೂರ್ತಿ ಪ್ರತಿಷ್ಠಾಪನೆಯಾದ ಐದು ದಿನಗಳ ನಂತರ ಜೋಕುಮಾರನನ್ನು ಆರಾಧಿಸುತ್ತಾರೆ. ನರೇಗಲ ಪಟ್ಟಣದ ಬಾರಕೇರ ಮನೆತನದ ಮಹಿಳೆಯರು, ಕುಂಬಾರರ ಮನೆಯಲ್ಲಿ ಜನಿಸುವ ಜೋಕುಮಾರನನ್ನು ಬಿದಿರು ಬುಟ್ಟಿಯಲ್ಲಿ ಕುಳ್ಳಿರಿಸಿ, ಪೂಜೆ ನೆರವೇರಿಸಿ ಮನೆ ಮನೆಗೆ ಹೋಗುವುದು ವಾಡಿಕೆ.
ಜೋಕುಮಾರನ ಹಾಡು ಇಲ್ಲಿದೆ ನೋಡಿ.
Author: Karnataka Files
Post Views: 5





