ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಸಂಖ್ಯೆ.63/2022 ನೇದ್ದರಲ್ಲಿ ದಾಖಲಾದ, ಕೊಲೆ ಪ್ರಕರಣದಲ್ಲಿ ತಾಯಿಯನ್ನು ಕೊಂದು, ತಂದೆಯನ್ನು ಕೊಲ್ಲಲು ಪ್ರಯತ್ನಿಸಿದ ಆರೋಪಿತನ ವಿರುದ್ಧ ಮಾನ್ಯ ಪ್ರಧಾನಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಧಾರವಾಡದಲ್ಲಿ ವಿಚಾರಣೆ ನಡೆದು ಸದರಿ ಆರೋಪಿತನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಈ ಪ್ರಕರಣವನ್ನು ಸರ್ಕಾರದ ಪರವಾಗಿ ಮಾನ್ಯ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕರಾದ ಶ್ರೀ ಪ್ರಶಾಂತ್ ತೋರಗಲ್ ಇವರಿಗೆ ಹಾಗೂ ಪ್ರಕರಣವನ್ನು ತನಿಖೆ ಕೈಗೊಂಡು ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ ತನಿಖಾಧಿಕಾರಿಯಾದ ಚಂದ್ರಶೇಖರ ಮಠಪತಿಯವರನ್ನು ಧಾರವಾಡ ಜಿಲ್ಲೆಯ ಎಸ್ ಪಿ ಶ್ರೀ ಡಾ. ಗೋಪಾಲ್ ಬ್ಯಾಕೋಡ್, ತಮ್ಮ ಕಚೇರಿಯಲ್ಲಿ ಸನ್ಮಾನಿಸಿ ಅಭಿನಂದಿಸಿದರು.
Author: Karnataka Files
Post Views: 1





