ರಾಜ್ಯ ಕಾಂಗ್ರೇಸ್ ಸರ್ಕಾರದ ದಕ್ಷ ಮಂತ್ರಿ ಎಂದೇ ಹೆಸರಾದ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಜಿಡ್ಡುಗಟ್ಟಿದ ಆಡಳಿತಯಂತ್ರಕ್ಕೆ ಗರಂ ಆಗಿದ್ದಾರೆ. ಧಾರವಾಡದಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಅಧಿಕಾರಿಗಳ ನಿರ್ಲಕ್ಷದ ಧೋರಣೆ, ಸಚಿವರ ಸಿಟ್ಟಿಗೆ ಕಾರಣವಾಗಿದೆ. ಕೆಲಸದ ವಿಷಯದಲ್ಲಿ ನಾನು ಎಂದಿಗೂ ರಾಜಿ ಆಗೋದಿಲ್ಲ ಎಂದು ಎಚ್ಚರಿಸಿರುವ ಲಾಡ್, ಯಾವ ಮುಲಾಜಿಗೂ ಬಗ್ಗಲ್ಲ, ಒಂದು ವೇಳೆ ಸುಧಾರಿಸಿಕೊಳ್ಳದಿದ್ದರೆ ಕಠಿಣ ಕ್ರಮ ಗ್ಯಾರೆಂಟಿ ಎಂದು ಹೇಳಿದ್ದಾರೆ. ನಾವೆಷ್ಟೆ ಮೃದು ಹೃದಯಿಗಳಾದರು ಜಿಡ್ದುಗಟ್ಟಿದ ಆಡಳಿತಯಂತ್ರಕ್ಕೆ ತಹಬದಿಗೆ ತರಲು ಕಟುವಾಗಲೇಬೇಕಾಗಿದೆ ಎಂದು ತಿಳಿಸಿದ್ದಾರೆ.
Author: Karnataka Files
Post Views: 2





