ಹಣಕಾಸು ಹಾಗೂ ವೈಯುಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಗದಗನಲ್ಲಿ ವ್ಯಕ್ತಿಯೋರ್ವನಿಗೆ ಚಾಕು ಇರಿಯಲಾಗಿದೆ. ದೇವು ರಾಯಬಾಗಿ ಎಂಬಾತ, ಸುನೀಲ್ ಬಾಂಡಗೆ ಎಂಬುವವನಿಗೆ ಚಾಕು ಇರಿದಿದ್ದಾನೆ. ಜನನಿಬೀಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆತಂಕ ಸೃಷ್ಟಿಸಿದೆ. ಗಾಯಗೊಂಡ ಸುನೀಲ್ ಬಾಂಡಗೆಯನ್ನು ಜಿಮ್ಸ್ ಆಸ್ಪತ್ರೆಗೆ ಧಾಖಲಿಸಲಾಗಿದೆ. ಸುನೀಲ್ ಎಂಬುವವನಿಗೆ ದೇವು ಹತ್ತು ಸಾವಿರ ರೂಪಾಯಿ ಸಾಲ ಕೊಟ್ಟಿದ್ದ ಎನ್ನಲಾಗಿದೆ. ಬೇರೆಯವರ ಕಡೆಯಿಂದ ಹತ್ತು ಸಾವಿರ ಕೊಡಿಸಿದ್ದರಿಂದ ದೇವು ತಾನು ಕೊಟ್ಟ ಹಣ ಕೇಳಿದ್ದಾನೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ದೇವು ಎಂಬಾತ ಸುನೀಲ್ ನಿಗೆ ಚಾಕು ಹಾಕಿದ್ದಾನೆ. ಆರೋಪಿ ದೇವು ರಾಯಬಾಗಿ ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ. ಸುನೀಲ್ ಬಾಂಡಗೆ ಎಂಬಾತನಿಗೆ ಹೊಟ್ಟೆ, ತಲೆ ಭಾಗಕ್ಕೆ ಗಾಯವಾಗಿದೆ.
Author: Karnataka Files
Post Views: 1





