ಹಿರೇಕೆರೂರನ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಬಿ ಸಿ ಪಾಟೀಲರಿಗೆ ಸರ್ಕಾರ ಪಿಂಚಣಿ ಕೊಟ್ಟಿಲ್ಲವಂತೆ. ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ಧ ಸಮರ ಸಾರುತ್ತಿರುವ ಬಿ ಸಿ ಪಾಟೀಲ, ಇದೀಗ ಪಿಂಚಣಿ ಕೊಟ್ಟಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಈ ಸರ್ಕಾರ ಮಾಜಿ ಶಾಸಕರಿಗೆ ಪಿಂಚಣಿ ಕೊಡಲಾರದಷ್ಟು ದಿವಾಳಿ ಎದ್ದಿದೆಯಾ ಎಂದು ಪ್ರಶ್ನಿಸಿದ್ದಾರೆ. ಕೋಟಿಗಟ್ಟಲೆ ಸಂಪಾದನೆ ಮಾಡಿರುವ ನಿಮಗೆ ಪಿಂಚಣಿ ಬೇರೆ ಬೇಕಾ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
Author: Karnataka Files
Post Views: 6





