ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಚಡಚಣ ಪಿ ಎಸ್ ಐ ಮಹಾದೇವ ಎಲಿಗಾರ ಅಮಾನತ್ತುಗೊಂಡಿದ್ದಾರೆ. ನವಲಗುಂದದಲ್ಲಿ ಪಿ ಎಸ್ ಐ ಆಗಿ ಒಳ್ಳೆಯ ಕೆಲಸ ಮಾಡಿದ್ದ ಅವರನ್ನು ನಂತರ ಹುಬ್ಬಳ್ಳಿಯಲ್ಲಿರುವ ಅರಣ್ಯ ವಿಚಕ್ಷಣ ದಳಕ್ಕೆ ವರ್ಗ ಮಾಡಲಾಗಿತ್ತು. ತದನಂತರ ಮಹಾದೇವ ಎಲಿಗಾರ ಎರಡನೇ ಬಾರಿಗೆ ಚಡಚಣ ಪೊಲೀಸ್ ಠಾಣೆಗೆ ವರ್ಗ ಮಾಡಲಾಗಿತ್ತು. ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ಮಹಾದೇವ ಎಲಿಗಾರ ಅಲ್ಲಿಯೂ ಹೆಸರು ಮಾಡಿದ್ದರು. ಸಾವಿನ ಪ್ರಕರಣವೊಂದರಲ್ಲಿ ಸರಿಯಾಗಿ ತನಿಖೆ ಮಾಡದ ಹಿನ್ನೆಲೆಯಲ್ಲಿ ಬೆಳಗಾವಿ ಉತ್ತರ ವಲಯದ ಆರಕ್ಷಕ ಮಹಾನಿರೀಕ್ಷಕ ವಿಕಾಶ್ ಕುಮಾರ, ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
Author: Karnataka Files
Post Views: 6





