ಪಂಚರಾಜ್ಯಗಳಲ್ಲಿ ಚುನಾವಣೆ ನಡೆದಿದ್ದು, ಪಂಚ ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಕಾಂಗ್ರೇಸ್ ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಂಚರಾಜ್ಯಗಳ ಫಲಿತಾಂಶದ ನಂತರ ಲೋಕಸಭೆಗೆ ದಿನಾಂಕ ಮುಂದೂಡಲ್ಲ ಎಂಬ ಭರವಸೆ ಇದ್ದು, ಮಾರ್ಚ ಅಂತ್ಯದ ವೇಳೆ ನೀತಿ ಸಂಹಿತೆ ಮುಗಿಯಬಹುದು ಎಂದು ತಿಳಿಸಿದ್ದಾರೆ. ಜನೇವರಿ 22 ರಂದು ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೊಳ್ಳಲಿದ್ದು, ಬಿಜೆಪಿಗೆ ಇದರಿಂದ ಲಾಭವಾಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ರಾಮಮಂದಿರದ ಪ್ರಕರಣ ಕೋರ್ಟನಲ್ಲಿ ಖುಲಾಸೆಗೊಂಡಿದ್ದು, ರಾಮಮಂದಿರ ಕಟ್ಟಲು ನಮ್ಮದೇನು ಅಭ್ಯಂತರವಿಲ್ಲ. ವಿವಿಧತೆಯಲ್ಲಿ ಏಕತೆ ಸಾರುವ ಈ ದೇಶದಲ್ಲಿ ಅನೇಕ ಧರ್ಮ, ಜಾತಿ, ಭಾಷೆಗಳು ಬೇರೂರಿವೆ ಎಂದು ಸಿದ್ದರಾಮಯ್ಯ ಹೇಳಿದರು.
Author: Karnataka Files
Post Views: 1





