ಕಡೆಗೂ ಅಳೆದು ತೂಗಿ ರಾಜ್ಯ ಕಾಂಗ್ರೇಸ್ ಘಟಕ ನಿಗಮ ಮಂಡಳಿ ನೇಮಕಾತಿಗೆ ಹೆಸರು ಅಂತಿಮಗೊಳಿಸಿದೆ. ವಿಧಾನ ಪರಿಷತ್ ಸದಸ್ಯರಾಗಿ ಹುಬ್ಬಳ್ಳಿ ಧಾರವಾಡ ಕಾಂಗ್ರೇಸ್ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ ಹೆಸರನ್ನು ಹೈಕಮಾಂಡಗೆ ಸೂಚಿಸಲಾಗಿದ್ದು, ಅಧಿಕೃತ ಮುದ್ರೆ ಒತ್ತುವದಷ್ಟೇ ಬಾಕಿ ಇದೆ. ಮತ್ತೊಂದೆಡೆ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಡಿ ಕೆ ಶಿವಕುಮಾರ ಕಟ್ಟಾ ಬೆಂಬಲಿಗ ಧಾರವಾಡದ ರಾಬರ್ಟ್ ದದ್ದಾಪುರಿ ಹೆಸರು ಅಂತಿಮಗೊಂಡಿದೆ. ಇವರಿಬ್ಬರ ಹೆಸರು ನಾಳಿದ್ದು ಅಧಿಕೃತವಾಗಿ ಘೋಷಣೆಯಾಗಲಿದೆ.
Author: Karnataka Files
Post Views: 5





