Download Our App

Follow us

Home » ರಾಜಕೀಯ » ಲೋಕಸಭಾ ಚುನಾವಣೆ ಹಿನ್ನೆಲೆ, ನಾಳೆ ದೆಹಲಿಯಲ್ಲಿ 28 ಸಚಿವರ ಮಹತ್ವದ ಸಭೆ

ಲೋಕಸಭಾ ಚುನಾವಣೆ ಹಿನ್ನೆಲೆ, ನಾಳೆ ದೆಹಲಿಯಲ್ಲಿ 28 ಸಚಿವರ ಮಹತ್ವದ ಸಭೆ

ಕರ್ನಾಟಕದ ಎಲ್ಲ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ಪಣ ತೊಟ್ಟಿರುವ ಕಾಂಗ್ರೇಸ್ ಹೈಕಮಾಂಡ ನಾಳೆ ಮಹತ್ವದ ಸಭೆ ಕರೆದಿದೆ. ದೆಹಲಿಗೆ ಬರುವಂತೆ ಲೋಕಸಭಾ ಚುನಾವಣೆ ಜವಾಬ್ದಾರಿ ಹೊತ್ತ 28 ಸಚಿವರಿಗೆ ದೆಹಲಿಗೆ ಬರುವಂತೆ ಹೇಳಿದೆ.

ರಾಜ್ಯದಲ್ಲಿ ಈಗಾಗಲೇ ಆಯಾ ಲೋಕಸಭಾ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂಬುದರ ಬಗ್ಗೆ ಕಾರ್ಯಕರ್ತರ ಅಭಿಪ್ರಾಯ ಕೇಳಿರುವ ಸಚಿವರು, ಹೈಕಮಾಂಡ ನಡೆಸುವ ಸಭೆಯಲ್ಲಿ ಹೇಳಲಿದ್ದಾರೆ ಎನ್ನಲಾಗಿದೆ. ಲೋಕಸಭಾ ಕ್ಷೇತ್ರಗಳಲ್ಲಿ ಟಿಕೇಟಗಾಗಿ ಪೈಪೋಟಿ ಇದ್ದು, ಜಾತಿ ಲೆಕ್ಕಾಚಾರದ ಮೇಲೆ ಸಮರ್ಥರನ್ನು ಆಯ್ಕೆ ಮಾಡಲು ಚರ್ಚೆ ನಡೆಸಲಾಗುತ್ತಿದೆ.

ನಾಳೆ ನಡೆಯಲಿರುವ ಹೈ ವೋಲ್ಟೇಜ್ ಸಭೆಯಲ್ಲಿ ಭಾಗವಹಿಸುವಂತೆ ಸಚಿವರಿಗೆ ಆಹ್ವಾನ ಬಂದಿದ್ದು, ಆದಷ್ಟು ಶೀಘ್ರದಲ್ಲಿ ಅಭ್ಯರ್ಥಿ ಘೋಷಣೆ ಮಾಡುವ ನಿಟ್ಟಿನಲ್ಲಿ ಹೈಕಮಾಂಡ ಉತ್ಸುಕವಾಗಿದೆ. ಸಭೆಯಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಎ ಐ ಸಿ ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ವರಿಷ್ಟರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆ ಸಿ ವೇಣುಗೋಪಾಲ, ಸುರ್ಜಿವಾಲಾ ಪಾಲ್ಗೊಳ್ಳಲಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

UPSC ಪರೀಕ್ಷೆಯಲ್ಲಿ ಕಮಾಲ್ ಮಾಡಿದ ಜಾಮೀಯಾ ಮಿಲಿಯಾ ಇಸ್ಲಾಮಿಯಾ / ಐಎಎಸ್ / ಐಪಿಎಸ್ ಪಾಸಾದ 55 ಮುಸ್ಲಿಮ್ ವಿದ್ಯಾರ್ಥಿಗಳು

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಸತಿ ತರಬೇತಿ ಅಕಾಡೆಮಿ ಈ ವರ್ಷ ಅತ್ಯುತ್ತಮ ಪ್ರದರ್ಶನ ನೀಡಿ, ಗಮನಾರ್ಹ ದಾಖಲೆಯನ್ನು ನಿರ್ಮಿಸಿದೆ. 2025 ರ ಯುಪಿಎಸ್‌ಸಿ ನಾಗರಿಕ ಸೇವೆಗಳ

Live Cricket

error: Content is protected !!