ರಾಹುಲ್ ಗಾಂಧಿ ನಡೆಸಲು ಉದ್ದೇಶಿಸಿರುವ ಮಣಿಪುರ ಟು ಮುಂಬೈ ಭಾರತ ಜೋಡೋ ನ್ಯಾಯ ಯಾತ್ರೆಗೆ ಅಸ್ಸಾಂ ಸರ್ಕಾರ ಅಡ್ಡಿಪಡಿಸಿದೆ. ಮಣಿಪುರದ ಇಂಪಾಲನಿಂದ ಯಾತ್ರೆ ಆರಂಭವಾಗುತ್ತಿದ್ದು, ಅಸ್ಸಾಂ ಸರ್ಕಾರ ತನ್ನ ರಾಜ್ಯದೊಳಗೆ ಹಾಯ್ದು ಹೋಗುವ ರಾಹುಲ್ ಯಾತ್ರೆಗೆ ತಕರಾರು ಎತ್ತಿದೆ. ಅಸ್ಸಾಂ ಸರ್ಕಾರದ ನಡೆಗೆ ಕಾಂಗ್ರೇಸ್ ಆಕ್ರೋಶ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದರೆ ಮಾತ್ರ ಅನುಮತಿ ನೀಡಲಾಗುವದೆಂದು ಅಸ್ಸಾಂ ಸರ್ಕಾರ ತಿಳಿಸಿದ್ದು, ಒಕ್ಕೂಟದ ವ್ಯವಸ್ಥೆಗೆ ಅಸ್ಸಾಂ ಸರ್ಕಾರ ವ್ಯತಿರಿಕ್ತವಾಗಿ ವರ್ತಿಸುತ್ತಿದೆ.
Author: Karnataka Files
Post Views: 1





