Download Our App

Follow us

Home » ರಾಜಕೀಯ » ವಿನೋದ ಅಸೂಟಿ ಅಧಿಕಾರ ಸ್ವೀಕಾರಕ್ಕೆ ಹರಿದು ಬಂದ ಜನಸಾಗರ. ಸರಳತೆ ಮೆರೆದ ಸರದಾರ.

ವಿನೋದ ಅಸೂಟಿ ಅಧಿಕಾರ ಸ್ವೀಕಾರಕ್ಕೆ ಹರಿದು ಬಂದ ಜನಸಾಗರ. ಸರಳತೆ ಮೆರೆದ ಸರದಾರ.

ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾಗಿ ನೇಮಕಗೊಂಡ ಧಾರವಾಡ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ವಿನೋದ ಅಸೂಟಿ ಅಧಿಕಾರ ಸ್ವೀಕರಿಸಿದರು. ಬೆಂಗಳೂರಿನ ಕಂಠಿರವ ಕ್ರೀಡಾಂಗಣದಲ್ಲಿರುವ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ವಿನೋದ ಅಸೂಟಿ ಸರಳತೆ ಮೆರೆದರು.

ನವಲಗುಂದ ತಾಲೂಕಾ ಕಾಂಗ್ರೇಸ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡರ, ಅಣ್ಣಿಗೇರಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ  ಮಂಜುನಾಥ ಮಾಯಣ್ಣವರ    ಕೈಯಿಂದ ಕಚೇರಿ ಉದ್ಘಾಟನೆ ಮಾಡಿಸಿದ ವಿನೋದ ಮೆಚ್ಚುಗೆ ಗಳಿಸಿದರು. ನೆಚ್ಚಿನ ಯುವ ನಾಯಕನ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾಗಲು ನವಲಗುಂದ ವಿಧಾನಸಭಾ ಕ್ಷೇತ್ರದ ಜನ, ಸ್ವಯಂ ಪ್ರೇರಿತರಾಗಿ ಆಗಮಿಸಿದ್ದರು.

ಅಧಿಕಾರ ಸ್ವೀಕಾರಕ್ಕೆ ಬಂದವರಿಗೆ ಶಾಲು ಹೊದಿಸಿ ಸನ್ಮಾನಿಸಿ,   ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿಗೆ, ಹಿರಿಯರಿಗೆ ಗೌರವಿಸಿದ ವಿನೋದ ಅಸೂಟಿ, ಮಾದರಿಯಾದರು. ಇದೆ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೇಸ್ ಅಧ್ಯಕ್ಷ ನಲಪಾಡ, ಹಾನಗಲ್ ಶಾಸಕ ಶ್ರೀನಿವಾಸ ಮಾನೆ, ನವಲಗುಂದ ಶಾಸಕ ಎಚ್ ಕೋನರೆಡ್ಡಿ, ನವಲಗುಂದ, ಅಣ್ಣಿಗೇರಿ ಬ್ಲಾಕ   ಕಾಂಗ್ರೇಸ್ ಹುಬ್ಬಳ್ಳಿ  ಗ್ರಾಮೀಣ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು, ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ, ವಿನೋದ ಅವರಿಗೆ ಶುಭ ಹಾರೈಸಿದರು. ಇದು ನನಗೆ ಸಿಕ್ಕ ಗೌರವ ಅಲ್ಲ, ಇದು ನವಲಗುಂದ ತಾಲೂಕಿನ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿಗೆ ಸಿಕ್ಕ ಗೌರವವಾಗಿದ್ದು, ಇದನ್ನು ನಾನು ನನ್ನ ಪಕ್ಷದ ಕಾರ್ಯಕರ್ತರಿಗೆ ಸಮರ್ಪಣೆ ಮಾಡುತ್ತಿದ್ದೇನೆ ಎಂದು ಅಸೂಟಿ ಹೇಳಿದರು.   ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರಿಗೆ ವಿನೋದ ಅಸೂಟಿ ಧನ್ಯವಾದ ಸಮರ್ಪಿಸಿದರು. 

ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಬಂದಿದ್ದ ಜನರು, ವಿನೋದ ಅಸೂಟಿಯವರಿಗೆ ಸನ್ಮಾನಿಸಿ, ಬೆನ್ನು ತಟ್ಟಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಂಜಾನ್ ರೋಜಾ ಮಾಡಿದ ವಿನೋದ ಅಸೂಟಿ : ಇಫ್ತಾರ ಕೂಟ ನಡೆಸಿ ಭಾವೈಕ್ಯತೆ ಮೆರೆದ ಯುವನಾಯಕ

ಪವಿತ್ರ ರಮಜಾನ್ ಹಬ್ಬ ಆರಂಭಗೊಂಡಿದೆ. ಮುಸ್ಲಿಮ್ ಸಮಾಜದವರು ಒಂದು ತಿಂಗಳ ಉಪವಾಸ ( ರೋಜಾ ) ಮಾಡುತ್ತಾರೆ. ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ವಿನೋದ ಅಸೂಟಿಯವರು ಇಂದು

Live Cricket

error: Content is protected !!