Download Our App

Follow us

Home » ರಾಜಕೀಯ » ಲೋಕ ಸಮರ. ಕಾಂಗ್ರೇಸ್ ಮೊದಲ ಹಂತದ ಪಟ್ಟಿ ಇಂದು ಬಿಡುಗಡೆ. ಧಾರವಾಡಕ್ಕೆ ” ಸಂತೋಷ “ದ ಸುದ್ದಿ. ಹಾವೇರಿಯಲ್ಲಿ ಆನಂದಗೆ ಟಿಕೇಟ್ ತಪ್ಪಿದರೆ, ಧಾರವಾಡದಲ್ಲಿ ರಜತ್ ಗೆ ಚಾನ್ಸ್

ಲೋಕ ಸಮರ. ಕಾಂಗ್ರೇಸ್ ಮೊದಲ ಹಂತದ ಪಟ್ಟಿ ಇಂದು ಬಿಡುಗಡೆ. ಧಾರವಾಡಕ್ಕೆ ” ಸಂತೋಷ “ದ ಸುದ್ದಿ. ಹಾವೇರಿಯಲ್ಲಿ ಆನಂದಗೆ ಟಿಕೇಟ್ ತಪ್ಪಿದರೆ, ಧಾರವಾಡದಲ್ಲಿ ರಜತ್ ಗೆ ಚಾನ್ಸ್

ಲೋಕ ಸಮರಕ್ಕೆ ಕರ್ನಾಟಕ ಕಾಂಗ್ರೇಸ್ ಸಜ್ಜಾಗಿದೆ. ಮಹಾ ಶಿವರಾತ್ರಿಯಂದು ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಘೋಷಣೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೇಸ್ ಹೈಕಮಾಂಡ ಇಂದು ಕರ್ನಾಟಕದ ಲೋಕಸಭಾ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ದೆಹಲಿಯಲ್ಲಿ ಚುನಾವಣಾ ಕೇಂದ್ರ ಸಮಿತಿಯ ಸಭೆ ನಡೆದಿದ್ದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಭಾಗವಹಿಸಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರವನ್ನು ಪ್ರತಿಷ್ಟೆಯ ಕಣವಾಗಿ ತೆಗೆದುಕೊಂಡಿರುವ ಕಾಂಗ್ರೇಸ್, ಈ ಸಲ ಶತಾಯ ಗತಾಯ ಧಾರವಾಡ ಕ್ಷೇತ್ರವನ್ನು ಗೆಲ್ಲಲು ಕಾಂಗ್ರೇಸ್ ಇನ್ನಿಲ್ಲದ ಕಸರತ್ತು ನಡೆಸಿದೆ. ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ನಿಟ್ಟಿನಲ್ಲಿ, ಸಧ್ಯದಲ್ಲೇ ಕಾಂಗ್ರೇಸ್ ಹೈಕಮಾಂಡ ” *ಸಂತೋಷ* “ದ ಸುದ್ದಿ ನೀಡಲಿದೆ.

ಹಾವೇರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮೇಲೆ  ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ನಿಂತಿದ್ದು, ಒಂದು ವೇಳೆ ಹಾವೇರಿಯಲ್ಲಿ ಕಾಂಗ್ರೇಸ್ ಆನಂದ ಗಡ್ಡದೇವರಮಠರನ್ನು ಕಣ್ಣಕ್ಕಿಳಿಸಿದರೆ, ಹಾವೇರಿಯಲ್ಲಿ # ಆನಂದದ #  ಗಾಳಿಯ ಜೊತೆಗೆ ಧಾರವಾಡದಲ್ಲಿ # ಸಂತೋಷ#  ದ ವಾತಾವರಣ ನಿರ್ಮಾಣವಾಗಲಿದೆ. ಆಕಸ್ಮಾತ್ ಹಾವೇರಿಯಲ್ಲಿ ಆನಂದ ಗಡ್ಡದೇವರಮಠಗೆ ಟಿಕೇಟ್ ತಪ್ಪಿದರೆ, ಧಾರವಾಡ ಕ್ಷೇತ್ರದಲ್ಲಿ ರಜತ್ ಉಳ್ಳಾಗಡ್ಡಿಮಠಗೆ ಚಾನ್ಸ್ ಸಿಗಲಿದೆ ಎನ್ನಲಾಗಿದೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ರಂಜಾನ್ ರೋಜಾ ಮಾಡಿದ ವಿನೋದ ಅಸೂಟಿ : ಇಫ್ತಾರ ಕೂಟ ನಡೆಸಿ ಭಾವೈಕ್ಯತೆ ಮೆರೆದ ಯುವನಾಯಕ

ಪವಿತ್ರ ರಮಜಾನ್ ಹಬ್ಬ ಆರಂಭಗೊಂಡಿದೆ. ಮುಸ್ಲಿಮ್ ಸಮಾಜದವರು ಒಂದು ತಿಂಗಳ ಉಪವಾಸ ( ರೋಜಾ ) ಮಾಡುತ್ತಾರೆ. ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ವಿನೋದ ಅಸೂಟಿಯವರು ಇಂದು

Live Cricket

error: Content is protected !!