ಉತ್ತರಪ್ರದೇಶದ ಗಾಜಿಪುರ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸೋಮವಾರ, ಮದುವೆಗೆ ಅತಿಥಿಗಳು ತುಂಬಿದ್ದ ಬಸ್ಗೆ ಬೆಂಕಿ ಹೊತ್ತಿಕೊಂಡಿದೆ. ಬಸ್ಸಿನಲ್ಲಿದ್ದ ಹಲವು ಮಂದಿ ಸಜೀವ ದಹನವಾಗಿರುವ ಸಾಧ್ಯತೆ ಇದೆ. ಬಸ್ಸಿನಲ್ಲಿ ಸುಮಾರು 30 ಜನರಿದ್ದರು ಎನ್ನಲಾಗಿದೆ. ನಂದು ಪಾಸ್ವಾನ್ ಅವರ ಮನೆಯಲ್ಲಿ ಮದುವೆ ಇತ್ತು, ಅವರ ಸಂಬಂಧಿಕರು ಈ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ನೆರವು ಘೋಷಿಸಿದ್ದಾರೆ.
Author: Karnataka Files
Post Views: 4





