ದೇಶದ ದೊಡ್ಡ ಪ್ರಜಾಪ್ರಭುತ್ವದ ಹಬ್ಬ ಲೋಕಸಭಾ ಚುನಾವಣೆಗೆ ಮೈದಾನ ಸಜ್ಜಾಗಿದೆ. ಪ್ರಮುಖ ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿ ಹೆಸರು ಘೋಷಣೆ ಮಾಡಿ, ಕದನಕ್ಕೆ ಕಿಚ್ಚು ಹಚ್ಚಿವೆ.
ಧಾರವಾಡ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ಎರಡು ಪಕ್ಷಗಳಲ್ಲಿ ಸಾಮಾಜಿಕ ಜಾಲತಾಣ ಫುಲ್ ಆಕ್ಟಿವ್ ಆಗಿವೆ. ಒಂದಕ್ಕೆ ಹತ್ತು ಸುಳ್ಳು ಹೇಳಿ, ಸುಳ್ಳನ್ನೇ ಸತ್ಯ ಎಂದು ನಂಬುವ ಹಾಗೆ ಮಾಡುವ ಜಾಲ ಸಕ್ರಿಯವಾಗಿದೆ.
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯಚಿತ್ರದ ಭರಾಟೆ ಜೋರಾಗಿ ಸದ್ದು ಮಾಡುತ್ತಿದೆ. ಅಂತರರಾಷ್ಟ್ರೀಯ ಪ್ರಖ್ಯಾತ ಯೂ ಟ್ಯೂಬರ್ ದೃವ ರಾಠಿ ತಮ್ಮ ಎಕ್ಸ್ ಅಕೌಂಟನಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿರುವ ಅವರು, ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿರೋಧಪಕ್ಷಗಳನ್ನು ಹೇಗೆ ಮುಗಿಸಲಾಗುತ್ತದೆ ಎಂದು ಹೇಳಲು ಈ ತರದ ವ್ಯಂಗ್ಯ ಚಿತ್ರ ವೈರಲ್ ಆಗುತ್ತಿವೆ.
Author: Karnataka Files
Post Views: 6





