ಭಗವಾನ್ ಶ್ರೀ ರಾಮನ ಆಶೀರ್ವಾದ ಹಾಗೂ ಎಲ್ಲಾ ದೇವರ ಕೃಪೆಯಿಂದ ನನಗೆ ಟಿಕೆಟ್ ಸಿಕ್ಕಿದೆ ಎಂದು ಬೀದರ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಸಾಗರ ಖಂಡ್ರೆ ಹೇಳಿದ್ದಾರೆ.
ಬೀದರ ಕ್ಷೇತ್ರದ ಜನರ ಆಶೀರ್ವಾದದಿಂದ ನಾನು ಗೆಲ್ಲುತ್ತೇನೆ ಎಂಬ ಭರವಸೆ ನನಗಿದೆ ಎಂದು ಸಾಗರ ಖಂಡ್ರೆ ತಿಳಿಸಿದ್ದಾರೆ. ಶ್ರೀರಾಮನನ್ನು ನೆನಪಿಸಿಕೊಂಡ ಸಾಗರ ಖಂಡ್ರೆಗೆ ನೆಟ್ಟಿಗರು ಕಾಲೆಳೆದಿದ್ದಾರೆ. ಶ್ರೀರಾಮನ ಹೆಸರು ಹೇಳಲು ನಿಮ್ಮ ವರಿಷ್ಟರ ಅನುಮತಿ ಪಡೆದಿದ್ದಿರಾ ಎಂದು ಪ್ರಶ್ನಿಸಿದ್ದಾರೆ.
Author: Karnataka Files
Post Views: 4





