ಬೆಳಗಾವಿಯ ಒಂಟಮುರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ ಕಂಬಕ್ಕೆ ಕಟ್ಟಿ ಹಲ್ಲೆಗೈದಿದ್ದ ಆರೋಪಿಗಳು ಭರ್ಜರಿ ಸ್ವಾಗತ ಸಿಕ್ಕಿದೆ.
ಪ್ರಕರಣದಲ್ಲಿರುವ ಎಲ್ಲ ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ ಆದೇಶ ಹೊರಬೀಳುತ್ತಿದ್ದಂತೆ ಜೈಲಿನ ಆವರಣದಲ್ಲಿ ಆರೋಪಿಗಳ ಬೆಂಬಲಿಗರು ಸಂಭ್ರಮಿಸಿದ್ದಾರೆ.
2023 ಡಿಸೆಂಬರ್ 11 ರಂದು ಬೆಳಗಾವಿಯ ವಂಟಮೂರಿಯಲ್ಲಿ ಇಡೀ ದೇಶವೇ ಬೆಚ್ಚಿ ಬೀಳುವ ಘಟನೆ ನಡೆದಿತ್ತು. ಅಲ್ಲದೆ ರಾಷ್ಟ್ರಮಟ್ಟದ ನಾಯಕರ ಗಮನ ಸೆಳೆದಿತ್ತು.
ಪ್ರಕರಣ ಸಂಬಂಧ 13 ಜನ ಆರೋಪಿಗಳನ್ನು ಬಂಧಿಸಿದ್ದ ಕಾಕತಿ ಠಾಣೆ ಪೊಲೀಸರು, ಆರೋಪಿಗಳಿಗೆ ಜೈಲಿಗೆ ಅಟ್ಟಿದ್ದರು. ಕೇವಲ ನಾಲ್ಕು ತಿಂಗಳ ಅವಧಿಯಲ್ಲೇ ಆರೋಪಿಗಳಿಗೆ ಜಾಮೀನು ಸಿಕ್ಕಿದ್ದು, ಆರೋಪಿ ಬಸಪ್ಪ ನಾಯ್ಕನನ್ನು ಅವನ ಅಭಿಮಾನಿಗಳು, ಜೈಲಿಗೆ ಹೋಗಿ ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ.
ಸಧ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Author: Karnataka Files
Post Views: 1





