ಶಾಂತಿಯ ತೋಟ ಕರ್ನಾಟಕ, ಇದೀಗ ವಿವಾಹ ವಿಚ್ಚೇದನದಲ್ಲಿಯೂ ಖ್ಯಾತಿ ಗಳಿಸಿದೆ. ವಿವಾಹ ವಿಚ್ಚೇದನದಲ್ಲಿ ಕರ್ನಾಟಕ ಭಾರತದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ವರದಿಯೊಂದು ತಿಳಿಸಿದೆ.
ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರ ಹೆಸರು ಮಾಡಿದ್ದು, ಮಹಾರಾಷ್ಟ್ರದಲ್ಲಿ ಶೇಕಡಾ 18.7 ರಷ್ಟು ವಿವಾಹ ವಿಚ್ಚೇದನಗಳಾಗುತ್ತವೆ. ಎರಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ಶೇಕಡಾ 11.7 ರಷ್ಟು ವಿವಾಹ ವಿಚ್ಚೇದನಗಳಾಗುತ್ತವೆ ಎಂದು ವರದಿ ಹೇಳಿದೆ.
ಇನ್ನು ಮೂರನೇ ಸ್ಥಾನದಲ್ಲಿ ಇರುವ ಉತ್ತರ ಪ್ರದೇಶದಲ್ಲಿ 8.8 ಮತ್ತು ಪಶ್ಚಿಮ ಬಂಗಾಲದಲ್ಲಿ ಶೇಕಡಾ 8.2, ದೆಹಲಿಯಲ್ಲಿ 7.7, ತಮಿಳುನಾಡಿನಲ್ಲಿ 7.1, ತೆಲಂಗಾಣದಲ್ಲಿ 6.7, ಕೇರಳದಲ್ಲಿ 6.3 ರಷ್ಟು ವಿವಾಹ ವಿಚ್ಚೇದನಗಳಾಗುತ್ತಿವೆ.
ಸಣ್ಣ ಪುಟ್ಟ ಭಿನ್ನಾಭಿಪ್ರಾಯಕ್ಕೆ ವಿಚ್ಚೇದನಗಳಾಗುತ್ತಿವೆ ಎಂದು ವರದಿಯೊಂದು ತಿಳಿಸಿದೆ. ಆಶ್ಚರ್ಯವೆಂದರೆ ಅವಿಧ್ಯಾವಂತರಿಗಿಂತ ವಿಧ್ಯಾವಂತರೆ ಹೆಚ್ಚು ವಿಚ್ಚೇದನ ಪಡೆಯುತ್ತಿರುವದು ಕಳವಳಕ್ಕೆ ಕಾರಣವಾಗಿದೆ.
Author: Karnataka Files
Post Views: 6





