ಬೇಡಿಕೆಯ ಬೀದಿ ಆಹಾರ ಎಂದೆ ಹೆಸರಾದ ಪಾನಿಪುರಿ ಮೇಲೆ ನಿಷೇಧ ಹೇರಲು ರಾಜ್ಯ ಸರ್ಕಾರ ಮುಂದಾಗಿದೆ. ಈಗಾಗಲೇ ಸರ್ಕಾರ, ಕಬಾಬ್ ಹಾಗೂ ಗೋಬಿ ಮಂಚೂರಿಗೆ ಬಳಸುವ ಬಣ್ಣವನ್ನು ನಿಷೇಧ ಮಾಡಿದೆ.
ಪಾನಿಪುರಿಯಲ್ಲಿ 5 ರಸಾಯನಿಕ ವಸ್ತುಗಳು ಇರುವದು ದೃಢಪಟ್ಟಿದೆ. ಆ ವಸ್ತುಗಳನ್ನು ಬಳಸಿ ಪಾನಿಪುರಿ ಮಾರಾಟ ಮಾಡುವಂತಿಲ್ಲ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ ತಿಳಿಸಿದ್ದಾರೆ.
ಪಾನಿಪುರಿ ತಯಾರಿಸಲು ಬಳಸುವ ಕೃತಕ ಬಣ್ಣದಲ್ಲಿ sun set yellow, rodomain ಎಂಬ ರಸಾಯನ ಸೇರಿದಂತೆ 5 ರಸಾಯನಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುತ್ತವೆ ಎಂದು ದಿನೇಶ ಗುಂಡೂರಾವ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಸೋಮವಾರ ಅಧಿಕೃತವಾಗಿ ಪಾನಿಪುರಿ ಮೇಲೆ ನಿಷೇಧ ಹೇರಲಿದೆ ಎಂದು ಸಚಿವ ದಿನೇಶ ತಿಳಿಸಿದ್ದಾರೆ. ಪಾನಿಪುರಿಯಲ್ಲಿ ಕ್ಯಾನ್ಸರಕಾರಕ ಅಂಶಗಳು ಇರುವದು ಪರೀಕ್ಷೆಯಿಂದ ದೃಢಪಟ್ಟಿದ್ದು, ರಾಜ್ಯದ 49 ಕಡೆ ಮಾರಾಟ ಮಾಡಲಾಗುತ್ತಿದ್ದ ಪಾನಿಪುರಿಯನ್ನು ಪರೀಕ್ಷೆಗೊಳಪಡಿಸಿ ಈ ನಿರ್ಧಾರಕ್ಕೆ ಬರಲಾಗಿದೆ.
Author: Karnataka Files
Post Views: 7





