ಉತ್ತರ ಪ್ರದೇಶದ ಹತ್ರಾಸ್‌ನ ಫುಲ್ರೈ ಗ್ರಾಮದಲ್ಲಿ ‘ಸತ್ಸಂಗ’ದ ಸಮಾರೋಪ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿದ ಪರಿಣಾಮ 60 ಜನ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 100 ಕ್ಕೂ ದಾಟಲಿದೆ ಎನ್ನಲಾಗಿದೆ.
ಸತ್ಸಂಗವು ಹಿಂದೂ ಧಾರ್ಮಿಕ ಸಭೆಯಾಗಿದ್ದು ಅದು ಸಾಮಾನ್ಯವಾಗಿ ರಾತ್ರಿಯಲ್ಲಿ ನಡೆಯುತ್ತದೆ. ಇಟಾಹ್ ಆಸ್ಪತ್ರೆಗೆ ಈಗಾಗಲೇ ಇಪ್ಪತ್ತೇಳು ದೇಹಗಳು ಬಂದಿವೆ. ಮೃತಪಟ್ಟವರಲ್ಲಿ 23 ಮಹಿಳೆಯರು, ಮೂವರು ಮಕ್ಕಳು ಮತ್ತು ಒಬ್ಬ ಪುರುಷ ಸೇರಿದ್ದಾರೆ ಎಂದು ಇಟಾಹ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಸತ್ಸಂಗದಲ್ಲಿ ಜನದಟ್ಟಣೆಯಿಂದಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಸಿಕಂದರ ರಾವ್ ಸ್ಪಷ್ಟಪಡಿಸಿದ್ದಾರೆ.
Author: Karnataka Files
Post Views: 1





