ಧಾರವಾಡ ಜಿಲ್ಲೆಯ ಚತುರ ರಾಜಕಾರಣಿ ಎಂದೆ ಹೆಸರಾದ ನವಲಗುಂದ ಕ್ಷೇತ್ರದ ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಸದ್ದಿಲ್ಲದೇ ಕೆಲಸವೊಂದನ್ನು ಮಾಡಿದ್ದಾರೆ.
ಸೋತೆ ಅಂತ ಸುಮ್ನೆ ಮನೆಯಲ್ಲಿ ಕುಳಿತುಕೊಳ್ಳದ ಶಂಕರ ಪಾಟೀಲ್ರು, ಬಹುದಿನಗಳ ಬೇಡಿಕೆ ಈಡೇರಿಸಿದ್ದಾರೆ. ನವಲಗುಂದ ನಗರಕ್ಕೆ ಬೈಪಾಸ್ ರಸ್ತೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರ ಮೇಲೆ ಒತ್ತಡ ಹೇರಿ, ಬಹುದಿನಗಳ ಕನಸನ್ನು ಈಡೇರಿಸಿದ್ದಾರೆ.
ಬೈಪಾಸ್ ರಸ್ತೆ ನಿರ್ಮಿಸಲು ಈಗಾಗಲೇ 350 ಕೋಟಿ ಹಣ ಮಂಜೂರಾಗಿದ್ದು, ಹೆದ್ದಾರಿ ಸಚಿವ ಗಡ್ಕರಿಯವರಿಗೆ ಶಂಕರ ಪಾಟೀಲ ಮುನೇನಕೊಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
Author: Karnataka Files
Post Views: 11





