ನನ್ನನ್ನು ಭೇಟಿ ಮಾಡಲು ಬರುವವರು ದಯವಿಟ್ಟು ಯಾರೂ ಶಾಲು, ಹೂ ಗುಚ್ಛ, ಹಾರ ತುರಾಯಿಗಳನ್ನು ತರಬಾರದು ಎಂದು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಜನರಲ್ಲಿ ಮನವಿ ಮಾಡಿದ್ದಾರೆ.
ಶಾಲು, ಹೂ ಗುಚ್ಚದ ಬದಲು ಕನ್ನಡ ಪುಸ್ತಕಗಳನ್ನು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನೋಟ್ ಬುಕ್ ಗಳನ್ನು ತಂದರೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಿಸಬಹುದು ಎಂದು ಹೇಳಿದ್ದಾರೆ.
ನಿಮ್ಮ ಪ್ರೀತಿ, ಹಾರೈಕೆ ಮತ್ತು ಅಭಿಮಾನಕ್ಕೆ ನಾನು ಎಂದೆಂದೂ ಚಿರಋಣಿ ಎಂದಿರುವ ಜೋಶಿ, ರಾಜಕಾರಣದಲ್ಲಿ ಸಾತ್ವಿಕ ಹೆಜ್ಜೆ ಇಟ್ಟಿದ್ದಾರೆ.
Author: Karnataka Files
Post Views: 8





