ಧಾರವಾಡಿಗರ ಅಪ್ತ ಸ್ನೇಹಿತ, ಶಾಸಕ ವಿನಯ ಕುಲಕರ್ಣಿಯವರ ಪ್ರಾಣದ ಗೆಳಯ ಮಲ್ಲು ಪೂಜಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಜಯನಗರದ ತಮ್ಮ ಕಚೇರಿಯಲ್ಲಿ ಇದ್ದಾಗಲೇ ಹೃದಯಾಘಾತವಾಗಿದ್ದು, ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮಲ್ಲು ಪೂಜಾರ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಪ್ರಾಣದ ಗೆಳೆಯ ಮಲ್ಲು ಪೂಜಾರ ಅವರ ನಿಧನಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ವಿನಯ ಕುಲಕರ್ಣಿ ಕಂಬನಿ ಮಿಡಿದಿದ್ದಾರೆ.
ಮಲ್ಲು ಪೂಜಾರ ಅವರ ಅಂತ್ಯಕ್ರೀಯೆ ನಾಳೆ ಕುಂದಗೋಳದಲ್ಲಿ ನಡೆಯಲಿದೆ
Author: Karnataka Files
Post Views: 1





