ಗೋವನಕೊಪ್ಪದ ಬಳಿ ಇಂದು ನಡೆದ ಹರೀಶನ ಕೊಲೆ ಕೇಸಿಗೆ ಸಂಬಂಧಿಸಿದಂತೆ, ಹಂತಕರ ಹೆಡೆಮುರಿಗೆ ಕಟ್ಟಲು, ನಗರ ಹಾಗೂ ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಧಾರವಾಡದ ಡೋರ ಗಲ್ಲಿಯ ಹರೀಶ ಶಿಂಧೆ ಟೈಲ್ಸ್ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದ. ನಿನ್ನೇ ಅವನನ್ನು, ಹಂತಕರು ಗೋವನಕೊಪ್ಪದ ವಾಸುದೇವ ಲೇಔಟ್ ಗೆ ಕರೆದುಕೊಂಡು ಹೋಗಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ.
ಹಂತಕರ ಹುಡುಕಾಟಕ್ಕೆ ನಗರ ಹಾಗೂ ಜಿಲ್ಲಾ ಪೊಲೀಸರು ತಂಡಗಳನ್ನು ರಚಿಸಿದ್ದು, ಹಲವು ಆಯಾಮಗಳಲ್ಲಿ ತನಿಖಾ ಕಾರ್ಯ ಕೈಗೊಂಡಿದ್ದಾರೆ. ಕೆಲ ಮೋಸ್ಟ ವಾಂಟೆಡ್ ಕ್ರಿಮಿನಲ್ ಗಳನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ.
Author: Karnataka Files
Post Views: 9





