Download Our App

Follow us

Home » ಕಾನೂನು » ವಿಧ್ಯಾಕಾಶಿ ಧಾರವಾಡದಲ್ಲಿ ಪೊಲೀಸ್ ಕಮಿಷನರ್ ರೌಂಡ್ಸ್. ಸಪ್ತಾಪುರದಲ್ಲಿ ವಿಧ್ಯಾರ್ಥಿಗಳ ಜೊತೆ ಸಂವಾದ

ವಿಧ್ಯಾಕಾಶಿ ಧಾರವಾಡದಲ್ಲಿ ಪೊಲೀಸ್ ಕಮಿಷನರ್ ರೌಂಡ್ಸ್. ಸಪ್ತಾಪುರದಲ್ಲಿ ವಿಧ್ಯಾರ್ಥಿಗಳ ಜೊತೆ ಸಂವಾದ

ಹುಬ್ಬಳ್ಳಿ ಧಾರವಾಡ ಮಹಾನಗರದ ಪೊಲೀಸ್ ಆಯುಕ್ತ ಎನ್ ಶಶಿಕುಮಾರ ಅವರಿಂದು ವಿಧ್ಯಾಕಾಶಿ ಧಾರವಾಡದಲ್ಲಿ ರೌಂಡ್ಸ್ ಹಾಕಿದರು. 

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಗಳು ಇರುವ ಸಪ್ತಾಪುರದಲ್ಲಿ, ತರಬೇತಿ ಪಡೆಯಲು ರಾಜ್ಯದ ಮೂಲೆ ಮೂಲೆಯಿಂದ ಬಂದಿರುವ ವಿಧ್ಯಾರ್ಥಿಗಳಿಗೆ ಬದುಕಿನ ಪಾಠ ಹೇಳಿಕೊಟ್ಟರು. 

ವಿಧ್ಯಾರ್ಥಿಗಳಿಗೆ, ದುಶ್ಚಟಗಳಿಂದ ದೂರ ಇರುವಂತೆ ಹೇಳಿದ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ಅವರು, ಅಪ್ಪ ಅಮ್ಮ ಕಷ್ಟಪಟ್ಟು ನಿಮ್ಮನ್ನು ಓದಲು ಕಳಿಸಿದ್ದಾರೆ. ಇಲ್ಲಿಂದ ಸಾಧನೆ ಮಾಡಿ, ತಂದೆ ತಾಯಿಗೆ ಗೌರವ ತಂದು ಕೊಡಿ ಎಂದು ಹೇಳಿದರು. 

ವಿವಿಧ ಹುದ್ದೆಗಳಿಗೆ ತರಬೇತಿ ಪಡೆಯಲು ಬಂದ ವಿಧ್ಯಾರ್ಥಿಗಳ ಜೊತೆ ರಸ್ತೆಯಲ್ಲಿಯೇ ನಿಂತು ನೀತಿ ಪಾಠ ಮಾಡಿದ ಪೊಲೀಸ್ ಕಮಿಷನರ್, ವಿಧ್ಯಾರ್ಥಿಗಳ ಮನಸ್ಸು ಗೆದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!