ಧಾರವಾಡದ ಓಲ್ಡ್ ಡಿಎಸ್ಪಿ ಸರ್ಕಲ್ ಬಳಿ ನಿನ್ನೇ ಮಧ್ಯರಾತ್ರಿ ಬೈಕ್ ಸವಾರನಿಗೆ ಬುಲೆರೋ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ.
ಬೈಕ್ ಸವಾರನಿಗೆ ಬುಲೆರೋ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಧಾರವಾಡದ ಮದಿಹಾಳ ನಿವಾಸಿ ರೋಹಿತ ಕುಂಬಾರ ಎಂಬಾತ ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ.
ಅಪಘಾತದ ದೃಶ್ಯ ಸಿ ಸಿ ಟಿವಿ ಯಲ್ಲಿ ಸೆರೆಯಾಗಿದ್ದು, ಬುಲೆರೋ ವಾಹನದ ಶೋಧ ಕಾರ್ಯ ನಡೆದಿದೆ.
Author: Karnataka Files
Post Views: 6





