ಹುಬ್ಬಳ್ಳಿಯಲ್ಲಿ ಅನಧಿಕೃತ ಸ್ಪಾ ಮಸಾಜ್ ಸೆಂಟರಗಳು ನಡೆಯುತ್ತಿದ್ದು, ಅಲ್ಲಿ ಆಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ಆರೋಪಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಅವರಿಗೆ ಪತ್ರ ಬರೆದಿರುವ ರಜತ್ ಉಳ್ಳಾಗಡ್ಡಿಮಠ, ಕೆಲವು ಸ್ಪಾ ಮಸಾಜ ಕೇಂದ್ರಗಳು ಮೂಲ ವ್ಯವಹಾರಿಕ ಉದ್ದೇಶವನ್ನೇ ಮರೆತಿವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈಗಾಗಲೇ ಹುಬ್ಬಳ್ಳಿಯಲ್ಲಿ ರೌಡಿಸಂ ಮಟ್ಟ ಹಾಕಿರುವ ತಾವು, ಹುಬ್ಬಳ್ಳಿಯನ್ನು ನಶೆ ಮುಕ್ತ ನಗರ ಮಾಡಲು ಸಂಕಲ್ಪ ತೊಟ್ಟಿದ್ದು ಶ್ಲಾಘನೀಯ ಎಂದಿರುವ ರಜತ್, ಅನಧಿಕೃತ ಸ್ಪಾ ಮಸಾಜ ಸೆಂಟರಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
Author: Karnataka Files
Post Views: 2





