ಪ್ರಸಿದ್ದ ಯಾತ್ರಾ ಸ್ಥಳ ಬೆಳಗಾವಿ ಜಿಲ್ಲೆಯ ಯಲ್ಲಮ್ಮನಗುಡ್ಡದ ಹೋಟೆಲ್ ಒಂದರಲ್ಲಿ ಕುಕ್ಕರ ಸ್ಫೋಟವಾದ ಘಟನೆ ನಡೆದಿದೆ.
ಘಟನೆಯಲ್ಲಿ ಹೋಟೆಲ್ ನಲ್ಲಿದ್ದ ಸಿಬ್ಬಂದಿ ಹಾಗೂ ಗ್ರಾಹಕರು ಸೇರಿದಂತೆ 15 ಜನರಿಗೆ ಸುಟ್ಟ ಗಾಯಗಳಾಗಿವೆ.
ಕುಕ್ಕರ ಸ್ಫೋಟಿಸುತ್ತಿದ್ದಂತೆ ಬ್ರಹದಾಕಾರದ ಹೊಗೆ ಕಾಣಿಸಿಕೊಂಡ ಬಳಿಕ ಪಕ್ಕದಲ್ಲಿಯೇ ಇದ್ದ ಜನ ಹೋಟೆಲ್ ಒಳಗೆ ಇದ್ದ ಜನರನ್ನು ಹೊರಗೆ ಕರೆತಂದಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆಗೆ ಧಾವಿಸಿದೆ. ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
Author: Karnataka Files
Post Views: 1





