ಕರ್ತವ್ಯಕ್ಕೆ ತಡವಾಗಿ ಬಂದಿದ್ದರಿಂದ ತಡ ಯಾಕೆ ಆಯ್ತು ಅಂತ ಕೇಳಿದ್ದಕ್ಕೆ, ಪೊಲೀಸ್ ಪೇದೆಯೊಬ್ಬ, ಮಹಿಳಾ ಪಿ ಎಸ್ ಐ ಮೇಲೆ ಹಲ್ಲೆ ಮಾಡಿದ ಘಟನೆ ಬೀದರನಲ್ಲಿ ನಡೆದಿದೆ.
ಹಲ್ಲೆ ಮಾಡಿದ ನ್ಯೂ ಟೌನ್ ಠಾಣೆಯ ಪೇದೆ ಧನರಾಜ ಎಂಬಾತನನ್ನು ಅಮಾನತು ಮಾಡಲಾಗಿದೆ.

ಧನರಾಜನನ್ನು ಇವತ್ತು ಕಂದಾಯ ಇಲಾಖೆಯ ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲಾಗಿತ್ತು. ಪರೀಕ್ಷಾ ಸಮಯಕ್ಕೂ ಮುನ್ನ ಬರಬೇಕಿದ್ದ ಧನರಾಜ ತಡವಾಗಿ ಬಂದಿದ್ದ. ಯಾಕೆ ತಡವಾಯ್ತು ಎಂದು ಮಹಿಳಾ ಪಿ ಎಸ್ ಐ ಮಲ್ಲಮ್ಮ ಪ್ರಶ್ನಿಸಿದ್ದೆ ತಡ, ಧನರಾಜ, ಮಲ್ಲಮ್ಮನ ಮೇಲೆ ಹಲ್ಲೆ ಮಾಡಿದ್ದಾನೆ.
ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪ್ರದೀಪ ಗುಂಟಿ, ಪೇದೆ ಧನರಾಜನನ್ನು ಅಮಾನತು ಮಾಡಿದ್ದಾರೆ. ಹಲ್ಲೆ ಮಾಡಿದ ಪರಿಣಾಮ ಮಲ್ಲಮ್ಮಳ ತಲೆಗೆ ಬಲವಾದ ಏಟು ಬಿದ್ದಿದ್ದು, ಆಸ್ಪತ್ರೆಗೆ ಧಾಖಲು ಮಾಡಲಾಗಿದೆ.
Author: Karnataka Files
Post Views: 1





