Download Our App

Follow us

Home » ಕಾನೂನು » ಆಸ್ತಿ ಕಬಳಿಸಲು ಸೊಸೆಯ ಕೊಲೆಗೆ ಸ್ಕೆಚ್ ಹಾಕಿದ್ದ ಅತ್ತೆ, ಮಾವ…ಸಂಚು ಬಟಾ ಬಯಲು

ಆಸ್ತಿ ಕಬಳಿಸಲು ಸೊಸೆಯ ಕೊಲೆಗೆ ಸ್ಕೆಚ್ ಹಾಕಿದ್ದ ಅತ್ತೆ, ಮಾವ…ಸಂಚು ಬಟಾ ಬಯಲು

ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಬದಾಮಿ ತಾಲೂಕಿನ ಯಂಡಿಗೇರಿ ಗ್ರಾಮ ದಲ್ಲಿ ಸೊಸೆಯ ಕೊಲೆ ಮಾಡಲು ಅತ್ತೆ, ಮಾವ ನಡೆಸಿದ ಸಂಚು ಬಟಾ ಬಯಲಾಗಿದೆ. 

ಯಂಡಿಗೇರಿ ಗ್ರಾಮದ ಮುತ್ತಕ್ಕಾ ಪೂಜಾರಿ ಎಂಬಾಕೆಯನ್ನು ಕೊಲೆ ಮಾಡಿದ ಬಳಿಕ ಆಕೆಯ ಶವವನ್ನು ಹೂಳಲು ಮಾವ ರಾಮಪ್ಪ, ಅತ್ತೆ ಪಾರ್ವತಿ ತೋಟದ ಮನೆಯಲ್ಲಿ ಗುಂಡಿ ತೋಡಿದ್ದು ಬೆಳಕಿಗೆ ಬಂದಿದೆ. 

ಮುತ್ತಕ್ಕನ ಪತಿ ತೀರಿಕೊಂಡು 5 ವರ್ಷಗಳಾಗಿದ್ದು, ಗಂಡನನ್ನು ಕಳೆದುಕೊಂಡ ಬಳಿಕ ಮುತ್ತಕ್ಕ, ಮಾವ ಹಾಗೂ ಅತ್ತೆಯ ಜೊತೆಗೆ ಇದ್ದಳು. ಇದ್ದಕ್ಕಿದ್ದಂತೆ ಆಸ್ತಿಯ ಪಾಲಿನ ವಿಚಾರ ಬಂದಾಗ ಮಾವ ಮತ್ತು ಅತ್ತೆ, ಸೊಸೆಯನ್ನು ಮುಗಿಸಲು ಹೊಂಚು ಹಾಕಿದರು ಎನ್ನಲಾಗಿದೆ. 

ಇದಕ್ಕಾಗಿಯೇ ಮುತ್ತಕ್ಕಳಿಗೆ ಕಳೆದ ವಾರ ಬೇರೆ ಮನೆ ಮಾಡಿಕೊಟ್ಟಿದ್ದ ಮಾವ ಹಾಗೂ ಅತ್ತೆ, ಸೂಸೆಯನ್ನು ಕೊಲೆ ಮಾಡಿದ ಬಳಿಕ ತೋಟದ ಮನೆಯಲ್ಲಿಯೇ ಹೂಳಲು ಗುಂಡಿ ತೋಡಿದ್ದು, ಮುತ್ತಕ್ಕಳಿಗೆ ಗೊತ್ತಾಗಿದೆ. 

ಸದ್ಯ ಈ ಸುದ್ದಿ ಕೆರೂರ ಪೊಲೀಸರಿಗೆ ಗೊತ್ತಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ, ಅತ್ತೆ ಹಾಗೂ ಮಾವನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇತ್ತ ಮುತ್ತಕ್ಕಳ ಪಾಲಕರು, ಮಗಳ ಕೊಲೆಗೆ ಸಂಚು ಮಾಡಿದ್ದಾರೆಂದು ಆರೋಪಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ : ಇಬ್ಬರು ಸುಲಿಗೆಕೋರರ ಬಂಧನ

ಹುಬ್ಬಳ್ಳಿಯ ದೇವರಗುಡಿಹಾಳದಿಂದ ರೇವಡಿಹಾಳಕ್ಕೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಕುಳಿತಿದ್ದ ದಂಪತಿಗಳನ್ನು ಕೆಳಗೆ ಇಳಿಸಿ ಬಂಗಾರದ ಆಭರಣ ದೋಚಿದ್ದ ಇಬ್ಬರು ಸುಲಿಗೆಕೋರರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಹೆಡೆಮುರಿಗೆ ಕಟ್ಟಿದ್ದಾರೆ.

Live Cricket

error: Content is protected !!