ಪೊಲೀಸರೆಂದರೆ, ಮೂಗು ಮುರಿಯುವವರೇ ಹೆಚ್ಚು. ಅಂತದರಲ್ಲಿ ಧಾರವಾಡದ ಪೊಲೀಸರು ಮಾನವೀಯತೆ ಮೆರೆದ ಘಟನೆ ನಡೆದಿದೆ. ತಪ್ಪಿಸಿಕೊಂಡಿದ್ದ ವೃದ್ಧನನ್ನು ಒಂದು ಘಂಟೆಯೊಳಗೆ ಪತ್ತೆ ಹಚ್ಚಿದ್ದಾರೆ.
ಧಾರವಾಡ ಮದಾರಮಡ್ಡಿಯ ನಿವಾಸಿಯಾದ ರಾಮಪ್ಪ ಸಿಕ್ಕಲಿಗಾರ, ಎಂಬ ವೃದ್ಧ, ತಪ್ಪಿಸಿಕೊಂಡಿದ್ದರ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ದೂರು ಧಾಖಲು ಮಾಡಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ಧಾರವಾಡ ಶಹರ ಮತ್ತು ಉಪನಗರ ಠಾಣೆಯ ಪೊಲೀಸರು, ಒಂದು ಗಂಟೆಯೊಳಗೇ ತಪ್ಪಿಸಿಕೊಂಡಿದ್ದ ವೃದ್ಧನನ್ನು ಪತ್ತೆ ಹಚ್ಚಿ ಮರಳಿ ಮನೆಯವರಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ಧಾರವಾಡ ಪೊಲೀಸರ ಈ ಕಾರ್ಯಕ್ಕೆ ವೃದ್ಧನ ಕುಟುಂಬದವರು ಸೇರಿದಂತೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Author: Karnataka Files
Post Views: 1





