ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಕೊಲೆಯನ್ನು ಬಳಸಿಕೊಂಡ ಬಿಜೆಪಿ, ಗೆದ್ದ ನಂತರ ಆ ಪ್ರಕರಣವನ್ನೇ ಮರೆತಿದೆ ಎಂದು ಲೋಕಸಭಾ ಕಾಂಗ್ರೇಸ್ ಅಭ್ಯರ್ಥಿಯಾಗಿದ್ದ ವಿನೋದ ಅಸೂಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೇಹಾ ಕೊಲೆ ಪ್ರಕರಣವನ್ನು ದೊಡ್ಡ ಮಟ್ಟದಲ್ಲಿ ಮುಂದಿಟ್ಟುಕೊಂಡಿದ್ದ ಬಿಜೆಪಿ, ಈ ಪ್ರಕರಣವನ್ನು ಗೆಲುವಿನ ಸಾಧನವನ್ನಾಗಿ ಬಳಸಿಕೊಂಡು ಈಗ ಬೀಸಾಡಿದೆ ಎಂದು ಅಸೂಟಿ ಆರೋಪಿಸಿದ್ದಾರೆ.
ಭಾವನಾತ್ಮಕವಾಗಿ ರಾಜಕೀಯ ಮಾಡಿಕೊಂಡು ಬಂದಿರುವ ಬಿಜೆಪಿ, ಕೊಲೆಯಾಗಿರುವ ನೇಹಾ ಹಿರೇಮಠಗೆ ನ್ಯಾಯ ಕೊಡಿಸುವಲ್ಲಿ ವಿಫಲವಾಗಿದೆ ಎಂದು ತಿಳಿಸಿದ್ದಾರೆ.
ಎರಡು ಅಧಿವೇಶನ ನಡೆದರು ಸಹ ಕೇಂದ್ರ ಸಚಿವ ಪ್ರಲ್ಲಾದ ಜೋಶಿ, ನೇಹಾ ಕೊಲೆ ಪ್ರಕರಣವನ್ನು ಚರ್ಚಿಸಿಲ್ಲ ಎಂದು ಅಸೂಟಿ ಆರೋಪಿಸಿದ್ದಾರೆ.
Author: Karnataka Files
Post Views: 4





