Download Our App

Follow us

Home » ಕರ್ನಾಟಕ » ಧಾರವಾಡದಲ್ಲಿ ಪೊಲೀಸ್ ಫೈರಿಂಗ್. ದರೋಡೆಕೋರನ ಸದ್ದಡಗಿಸಿದ ಗಂಡೆದೆಯ ಪೊಲೀಸರು

ಧಾರವಾಡದಲ್ಲಿ ಪೊಲೀಸ್ ಫೈರಿಂಗ್. ದರೋಡೆಕೋರನ ಸದ್ದಡಗಿಸಿದ ಗಂಡೆದೆಯ ಪೊಲೀಸರು

ಆತ, ಐದು ರಾಜ್ಯಗಳಿಗೆ ಬೇಕಾಗಿದ್ದ ನಟೋರಿಯಸ್ ದರೋಡೆಕೋರ. ಆತನ ಮೇಲೆ 80 ಕ್ಕೂ ಹೆಚ್ಚು ಕಳ್ಳತನ, ದರೋಡೆ ಪ್ರಕರಣ ಧಾಖಲಾಗಿತ್ತು.

ಆ ನಟೋರಿಯಸ್ ದರೋಡೆಕೋರನ ಹೆಸರು ಪಾಲಾ ವೆಂಕಟೇಶ್. ಆಂಧ್ರಪ್ರದೇಶದ ಕರ್ನೋಲ್ ನವನಾದ ಪಾಲಾ ವೆಂಕಟೇಶ್ ಕಳೆದ 6 ತಿಂಗಳ ಹಿಂದೆ ನವಲೂರು ಹೊರವಲಯದಲ್ಲಿ ದರೋಡೆ ಮಾಡಿದ್ದ. 

5 ರಾಜ್ಯಗಳ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಪಾಲಾ ವೆಂಕಟೇಶ್, ಕರ್ನಾಟಕದ ಪೊಲೀಸರಿಗೆ, ಅದು ಹುಬ್ಬಳ್ಳಿ ಧಾರವಾಡ ಪೋಲಿಸರಿಗೆ ಸಿಕ್ಕು ಬಿದ್ದಿದ್ದ. 

ಆತನನ್ನು ದರೋಡೆ ನಡೆದ ಸ್ಥಳಕ್ಕೆ ಕರೆತರುವ ವೇಳೆ ಪಾಲಾ ವೆಂಕಟೇಶ್, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. 

ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಪಾಲಾ ವೆಂಕಟೇಶ್ ನ ಮೇಲೆ ಗುಂಡು ಹಾರಿಸಿದ್ದಾರೆ. ಪೊಲೀಸರು ಹಾರಿಸಿದ ಗುಂಡು, ಪಾಲಾ ನ ಎರಡು ಕಾಲಿಗೆ ಹೊಕ್ಕಿವೆ. 

ಸದ್ಯ ಪಾಲಾನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಧಾಖಲು ಮಾಡಲಾಗಿದೆ. ಗಾಯಗೊಂಡ ಪೋಲಿಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ಧಾಖಲು ಮಾಫಲಾಗಿದೆ. ಸ್ಥಳಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ ಭೇಟಿ ನೀಡಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ : ಇಬ್ಬರು ಸುಲಿಗೆಕೋರರ ಬಂಧನ

ಹುಬ್ಬಳ್ಳಿಯ ದೇವರಗುಡಿಹಾಳದಿಂದ ರೇವಡಿಹಾಳಕ್ಕೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಕುಳಿತಿದ್ದ ದಂಪತಿಗಳನ್ನು ಕೆಳಗೆ ಇಳಿಸಿ ಬಂಗಾರದ ಆಭರಣ ದೋಚಿದ್ದ ಇಬ್ಬರು ಸುಲಿಗೆಕೋರರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಹೆಡೆಮುರಿಗೆ ಕಟ್ಟಿದ್ದಾರೆ.

Live Cricket

error: Content is protected !!