ಡಾ, ಬಾಬಾಸಾಹೇಬ ಅಂಬೇಡ್ಕರ ಅವರ ಕುರಿತು ಅವಹೇಳನಕಾರಿ ಹೇಳಿಕೆ ಖಂಡಿಸಿ ವಿವಿಧ ಸಂಘಟನೆಗಳು ಇಂದು ನವಲಗುಂದ ಬಂದ್ ಗೆ ಕರೆ ನೀಡಿವೆ.
ಬೆಳಿಗ್ಗೆಯಿಂದ ಬಂದ್ ಆರಂಭವಾಗಿದ್ದು, ಅಂಗಡಿ ಮುಗ್ಗಟ್ಟುಗಳ ವ್ಯಾಪಾರಿಗಳು ವ್ಯಾಪಾರ ವಹಿವಾಟು ಬಂದ್ ಮಾಡಿದ್ದಾರೆ.
ರಸ್ತೆ ಸಂಚಾರ ಸ್ಥಬ್ದಗೊಂಡಿದ್ದು, ಶಾಲಾ ಕಾಲೇಜುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿದೆ.
ಮುನ್ನೇಚ್ಚರಿಕೆ ಕ್ರಮವಾಗಿ ನವಲಗುಂದದಲ್ಲಿ ಬಿಗಿ ಪೊಲೀಸ್ ಬಂದುಬಸ್ತ ಮಾಡಲಾಗಿದೆ.
Author: Karnataka Files
Post Views: 1





