ಗೋಕಾಕನ ಮಹಾಲಕ್ಸ್ಮಿ ಬ್ಯಾಂಕಿನ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟ ಜಿಲ್ಲೆಯ ಬಬಲಾದಿ ಮುತ್ತ್ಯಾರನ್ನು ಸಿ ಐ ಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಬಲಾದಿ ಮಠದ ಸದಾಶಿವ ಹಿರೇಮಠ ಸ್ವಾಮೀಜಿಯನ್ನು ಸಿ ಐ ಡಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಮಹಾಲಕ್ಷ್ಮಿ ಬ್ಯಾಂಕಿನಲ್ಲಿ ಪಿಯೂನ್ ಆಗಿದ್ದ ಸಾಗರ ಸಬಕಾಳೆ ಎಂಬ ಪ್ರಮುಖ ಆರೋಪಿ ಮುತ್ತ್ಯಾನ ಮತ್ತು ಅವರ ಧರ್ಮಪತ್ನಿ ಹಾಗೂ ಮಗನ ಖಾತೆಗೆ ಆಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದ ಎನ್ನಲಾಗಿದೆ.
ಗೋಕಾಕಿನ ಮಹಾಲಕ್ಸ್ಮಿ ಬ್ಯಾಂಕಿನಲ್ಲಿ ಒಟ್ಟು 76 ಕೋಟಿ ಅವ್ಯವಹಾರ ಆಗಿದೆ ಎನ್ನಲಾಗಿದ್ದು, 76 ಕೋಟಿಯಷ್ಟು ಹಣವನ್ನು ಬೇರೆ ಬೇರೆಯವರ ಖಾತೆಗೆ ಹಾಕಿ ಬ್ಯಾಂಕಿಗೆ ವಂಚನೆ ಮಾಡಿದ್ದರ ಹಿನ್ನೆಲೆಯಲ್ಲಿ, ಗೋಕಾಕನಲ್ಲಿ ದೂರು ಧಾಖಲಾಗಿತ್ತು.
Author: Karnataka Files
Post Views: 1





