ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ ಅವರು ಇಂದು ಹುಬ್ಬಳ್ಳಿ ಧಾರವಾಡದಲ್ಲಿ ನಡೆದ ಉರುಸಿನಲ್ಲಿ ಭಾಗವಹಿಸಿ ದರ್ಗಾ ಶರೀಫನಲ್ಲಿ ಚಾದರ ಸಮರ್ಪಣೆ ಮಾಡಿದರು.
ಹುಬ್ಬಳ್ಳಿಯ ಇಂಡಿ ಪಂಪನಲ್ಲಿ ಇರುವ ಸಯ್ಯದ ಫತೆಶಾವಲಿ ದರ್ಗಾಕ್ಕೆ ತೆರಳಿದ ಆಯುಕ್ತರು, ಚಾದರ ಸಮರ್ಪಣೆ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಧಾರವಾಡಕ್ಕೆ ಆಗಮಿಸಿದ ಅವರು, ಪೆಂಡಾರ ಓಣಿಯಲ್ಲಿರುವ ಸಯ್ಯದ ಸಾದಾತ ದರ್ಗಾದ ಉರುಸು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಲ್ಲಿಯೂ ಸಹ ಚಾದರ ಸಮರ್ಪಿಸಿ ಪೂಜೆ ಸಲ್ಲಿಸಿದರು.

ಹುಬ್ಬಳ್ಳಿ ಧಾರವಾಡ ಮಹಾನಗರಕ್ಕೆ ಪೊಲೀಸ ಆಯುಕ್ತರಾಗಿ ಬಂದಾಗಿನಿಂದ ಎನ್ ಶಶಿಕುಮಾರ ಅವರು, ಹಿಂದೂ ಮುಸ್ಲಿಂ ಐಕ್ಯತೆ ಸಾರುವಲ್ಲಿ ಯಶಸ್ವಿಯಾಗಿದ್ದಾರೆ. ಕೋಮು ದಳ್ಳುರಿಗೆ ಹೆಸರಾದ ಅವಳಿ ನಗರದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದಾರೆ.
Author: Karnataka Files
Post Views: 1





