ಸಿದ್ದರೋಡರು, ಶಿಶುನಾಳ ಶರೀಫ, ಹೊಸಳ್ಳಿ ಬೂದಿ ಸ್ವಾಮಿಗಳು, ಗರಗದ ಮಡಿವಾಳಪ್ಪನ ಸಮಕಾಲಿನರವರಾದ ಪವಾಡ ಪುರುಷ ನವಲಗುಂದ ನಾಗಲಿಂಗಪ್ಪನ ಜಾತ್ರೆ ಇಂದಿನಿಂದ ಆರಂಭವಾಗಿದೆ.
ನಾಗಲಿಂಗಜ್ಜನ ಜಾತ್ರೆಗೆ ಗೋವಾ ಮಹಾರಾಷ್ಟ್ರ ರಾಜ್ಯದಿಂದ ಭಕ್ತರು ನವಲಗುಂದಕ್ಕೆ ಆಗಮಿಸುತ್ತಿದ್ದಾರೆ. ಶ್ರೀ ಮಠದಲ್ಲಿ ಕ್ರಿಶ್ಚಿಯನರ್ ಪವಿತ್ರ ಗ್ರಂಥ ಬೈಬಲ್, ಮುಸ್ಲಿಮರ ಪಂಜಾ, ಮತ್ತು ಸಿದಗಿ ( ಮೃತಪಟ್ಟಾಗ ಪಾರ್ಥಿವ ಶರೀರ ಸಾಗಿಸುವ ) ಗೆ ತ್ರಿಕಾಲ ಪೂಜೆ ಮಾಡಲಾಗುತ್ತದೆ
ನಾಳೆ ಸಂಜೆ ಪಲ್ಲಕ್ಕಿ ಮೆರವಣಿಗೆ ನಡೆಯಲಿದ್ದು, ಇಡೀ ರಾತ್ರಿ ನಗರದಲ್ಲಿ ಸಂಚರಿಸಿ ಮತ್ತೆ ನಾಗಲಿಂಗನ ಮಠಕ್ಕೆ ತಲುಪಲಿದೆ.
ಪುರವಂತರು ಮುಂದೆ ಸಾಗುತ್ತಿದ್ದಂತೆ ಪಲ್ಲಕ್ಕಿ ಮೆರವಣಿಗೆ ಆರಂಭವಾಗುತ್ತದೆ. ಭೋವಿ ಸಮಾಜದವರು ಪಲ್ಲಕ್ಕಿ ಹೊರಲಿದ್ದು, ಬಂದಂತಾ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುತ್ತದೆ.
Author: Karnataka Files
Post Views: 1





