ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಣ್ಣಿಗೇರಿ ತಾಲೂಕು ಘಟಕದ ಪ್ರಥಮ ಶರಣ ಸಾಹಿತ್ಯ ಸಮ್ಮೇಳನ ಅಕ್ಟೋಬರ್ 6 ಸೋಮವಾರದಂದು ತಾಲೂಕಿನ ಅಡ್ನೂರು ಗ್ರಾಮದಲ್ಲಿ ಜರುಗಲಿದೆ.
ಖ್ಯಾತ ಪ್ರವಚನಕಾರ ಅಡ್ನೂರು ಗ್ರಾಮದವರೇ ಆದ ಪಂಡಿತ್ ಶ್ರೀ ಎಂ ಕಲ್ಲಿನಾಥಶಾಸ್ತ್ರಿಗಳು ಸಮ್ಮೇಳನದ ಸರ್ವಾಧ್ಯಕ್ಷರ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಅಣ್ಣಿಗೇರಿಯ ಚಂದ್ರಶೇಖರ ಕೊಟ್ಟೂರ ಧ್ವಜಾರೋಹಣ ನೆರವೇರಿಸಲಿದ್ದು, ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಗದಗಿನ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ, ತಂಗಡಗಿ ಅನ್ನದಾನ ಭಾರತಿ ಹಡಪದ ಅಪ್ಪಣ್ಣ ಸ್ವಾಮೀಜಿ ಸಾನಿಧ್ಯದಲ್ಲಿ, ಕ್ಷೇತ್ರದ ಶಾಸಕ ಎನ್ ಎಚ್ ಎಚ್ ಕೋನರಡ್ಡಿ ಅಧ್ಯಕ್ಷತೆಯಲ್ಲಿ ಪರಿಷತ್ತಿನ ಅಧ್ಯಕ್ಷರಾದ ಡಾ ಸಿ ಸೋಮಶೇಖರ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಮಾಜಿ ಶಾಸಕರಾದ ಸಿ ಸಿ ಪಾಟೀಲ, ಕುಸುಮಾವತಿ ಶಿವಳ್ಳಿ, ಪದ್ಮಶ್ರೀ ಪುರಸ್ಕೃತ ಕೃಷಿವಿಜ್ಞಾನಿ ಡಾ ಅಬ್ದುಲ್ ಖಾದರ್ ನಡಕಟ್ಟಿನ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಹೈಕೋರ್ಟ್ ನ್ಯಾಯವಾದಿ ಸಿ ಎಸ್ ಪಾಟೀಲ ಪರಿವಾರ ತಮ್ಮ ಅಜ್ಜ ಬಸನಗೌಡ ಪಾಟೀಲ ಅವರ ಸ್ಮರಣೆಯ ನಿಮಿತ್ಯ ಸಮ್ಮೇಳನದ ಆತಿಥ್ಯ ದಾಸೋಹಸೇವೆ ವಹಿಸಿಕೊಂಡಿದ್ದಾರೆ.
ಎ ಎಂ ಪಾಟೀಲ ಅಧ್ಯಕ್ಷತೆಯಲ್ಲಿ ನಡೆಯುವ ಮೊದಲ ಚಿಂತನ ಗೋಷ್ಠಿಯಲ್ಲಿ ಧಾರವಾಡದ ಡಾ ಬಸವರಾಜ ನಾಗವ್ವನವರ ಹಾಗೂ ಅಣ್ಣಿಗೇರಿಯ ಡಾ ಶಾಂತಾ ಲಕ್ಷ್ಮೇಶ್ವರ ಕ್ರಮವಾಗಿ ಅಲಕ್ಷಿತ ವಚನಕಾರ ಹಾಗೂ ವಚನಕಾರ್ತಿಯರು ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.
ಪ್ರೊ ಸಿ ಎಸ್ ಹೊಸಮಠ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಎರಡನೇ ಚಿಂತನಗೋಷ್ಠಿ ಪ್ರಾತಃಸ್ಮರಣೀಯರು ಮಾಲಿಕೆಯಲ್ಲಿ ಗದಗಿನ ಡಾ ಶರಣಬಸವ ವೆಂಕಟಾಪೂರ ಸಾಂಸ್ಕೃತಿಕ ನಾಯಕ ಬಸವಣ್ಣ, ಹುಲಕೋಟಿಯ ಡಾ ಆರ್ ಎಂ ಕಲ್ಲನಗೌಡ ಅವರು ಅಡ್ನೂರಿನ ಶರಣ ಜೀವಿ ಶ್ರೀ ಬಸನಗೌಡರು ಪಾಟೀಲ ಅವರ ಕುರಿತು ಉಪನ್ಯಾಸ ನೀಡಲಿದ್ದಾರೆ.
ಅಣ್ಣಿಗೇರಿಯ ಶರಣಬಸಪ್ಪನವರು ದೇಶಮುಖ ಅವರ ಅಧ್ಯಕ್ಷತೆಯಲ್ಲಿ ಜರುಗಲಿರುವ ಸಮಾರೋಪ ಸಮಾರಂಭದಲ್ಲಿ ಉಪ್ಪಿನ ಬೆಟಿಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.
ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಅವರ ಮೊಮ್ಮಗಳಾದ ಪ್ರಭಾವತಿ ರಬರಬಿ ಅಣ್ಣಿಗೇರಿಯ ವಾಸಿಯಾಗಿದ್ದು ಅಣ್ಣಿಗೇರಿ ಜನತೆಯ ಭಾಗ್ಯ ಎಂದು ಭಾವಿಸಿ ಅವರಿಗೆ ಮಾಜಿ ಸಚಿವ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದ್ದಾರೆ.
ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ ಸಂಗಮನಾಥ ಲೋಕಾಪೂರ, ಡಾ ಶಂಭು ಹೆಗಡಾಳ, ಪಿ ಎಚ್ ನೀರಲಕೇರಿ, ಹೋಳಿಯಪ್ಪ ಯಾದವಾಡ, ಚಂದ್ರಶೇಖರ ದಾಡಿಬಾಯಿ ಮತ್ತಿತರರು ಅದಕ್ಕೆ ಸಾಕ್ಷಿಯಾಗಲಿದ್ದಾರೆ.





