Download Our App

Follow us

Home » ಕಾನೂನು » ಸಮೀಕ್ಷಾ ಕಾರ್ಯದ ಒತ್ತಡ : ದಸರಾ ರಜೆ ವಿಸ್ತರಿಸುವ ಸಾಧ್ಯತೆ !

ಸಮೀಕ್ಷಾ ಕಾರ್ಯದ ಒತ್ತಡ : ದಸರಾ ರಜೆ ವಿಸ್ತರಿಸುವ ಸಾಧ್ಯತೆ !

ರಾಜ್ಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ಕಾರ್ಯ ನಡೆಯುತ್ತಿದ್ದು, ದಸರಾ ರಜೆಯನ್ನು ಮತ್ತಷ್ಟು ದಿನಗಳ ಕಾಲ ಮುಂದೂಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಮನವಿ ಮಾಡಿಕೊಂಡಿದೆ ಎನ್ನಲಾಗಿದೆ. 

ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ತೊಡಗಿದ್ದು, ಸರ್ಕಾರ ನಿಗದಿ ಮಾಡಿದಂತೆ ಇಂದು ಸಮೀಕ್ಷಾ ಕಾರ್ಯ ಮುಕ್ತಾಯವಾಗಬೇಕಿತ್ತು.

ಸಮೀಕ್ಷೆ ಸಂದರ್ಭದಲ್ಲಿ ಕೆಲವು ಕಡೆಗೆ ತಾಂತ್ರಿಕ ಸಮಸ್ಯೆ ಎದುರಾಗಿದ್ದರ ಪರಿಣಾಮ ತಡವಾಗಿದೆ ಎನ್ನಲಾಗಿದೆ. 

ರಜೆಯನ್ನು ಅಕ್ಟೋಬರ್ 17 ರ ವರೆಗೆ ವಿಸ್ತರಿಸಬೇಕೆಂದು ಸಂಘ ಮನವಿ ಮಾಡಿದೆ ಎನ್ನಲಾಗಿದೆ. ದಸರಾ ರಜೆ ವಿಸ್ತರಿಸುವ ಸಾಧ್ಯತೆ ಬಗ್ಗೆ ಇನ್ನಷ್ಟೇ ಅಧಿಕೃತ ಹೇಳಿಕೆ ಸರ್ಕಾರದಿಂದ ಬರಬೇಕಿದೆ. 

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!