ಆತ ತನ್ನ ಏರಿಯಾದಲ್ಲಿ ಅಲ್ಪ, ಸ್ವಲ್ಪ ಹವಾ ಮೆಂಟೇನ್ ಮಾಡ್ತಾ ಇದ್ದ. ರೌಡಿಸಂ ನಲ್ಲಿ ಒಂದು ರೇಂಜಿಗೆ ಬಂದು ನಿಂತಿದ್ದ ಅವನಿಗೆ ಅಲ್ಲಿನ ಜನ “ಅಣ್ಣಾ ” ಎಂದು ಕರೆಯುತ್ತಿದ್ದರು.
ಅದೊಂದು ದಿನ “ಅಣ್ಣಾ ” ಎಂದು ಕರೆಸಿಕೊಳ್ಳುತ್ತಿದ್ದವನಿಗೆ ಆತನ ಗೆಳೆಯ ಸಲುಗೆಯಿಂದ “ಲೇ” ಅಂದಿದ್ದೆ ತಪ್ಪಾಯ್ತು ನೋಡಿ. ಹಿಂದೆ ಮುಂದೆ ನೋಡದೆ ಅವನಿಗೆ ಮನಸೋ ಇಚ್ಛೆ ಥಳಿಸಲಾಗಿದೆ. ಈ ಘಟನೆ ಗದಗನಲ್ಲಿ ನಡೆದಿದೆ.
ಅಂದಂಗೆ ” ಅಣ್ಣಾ ” ಎಂದು ಕರೆಸಿಕೊಂಡವನ ಹೆಸರು ರೋಹನ್ ಅಂತಾ, ಈತ ಗದಗಿನ ಹಾತಲಗೇರಿ ನಾಕಾದವನು. ರೋಹನನಿಂದ ಹೊಡೆತ ತಿಂದ ಕಾರ್ತಿಕ ಸಹ ಅದೇ ಏರಿಯಾದವನು.
“ಲೇ ” ಎಂದ ಕಾರಣಕ್ಕೆ ರೋಹನ್ ಮತ್ತು ಆತನ ಪಟಾಲಂ ಕಾರ್ತಿಕನ ತಲೆ, ಎದೆ, ಕುತ್ತಿಗೆಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ.
ಬಡಾವಣೆ ಪೊಲೀಸರು, ಪ್ರಕರಣ ಧಾಖಲಿಸಿಕೊಂಡು ಐವರನ್ನು ಬಂಧಿಸಿದ್ದಾರೆ. “ಅಣ್ಣಾ” ಈಗ ಪೊಲೀಸರ ಅತಿಥಿಯಾಗಿದ್ದು, “ಅಣ್ಣ” ನಿಗೆ ಸರಿಯಾದ ಪಾಠ ಕಲಿಸಬೇಕಿದೆ.
Author: Karnataka Files
Post Views: 3





