ಪೇಡಾ ನಗರಿ ಧಾರವಾಡ ನಾಳೆ ಜಗತ್ತಿನ ಅತೀ ದೊಡ್ಡ ಸಂಘಟನೆಯಾಗಿರುವ ಆರ್ ಎಸ್ ಎಸ್ ನ ಪಥಸಂಚಲನಕ್ಕೆ ಸಾಕ್ಷಿಯಾಗಲಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷಗಳು ತುಂಬಿದ್ದು, ವಿಜಯ ದಶಮಿ ಹಿನ್ನೆಲೆಯಲ್ಲಿ ನಾಳೆ ರವಿವಾರ ಬೃಹತ್ ಪಥಸಂಚಲನ ನಡೆಯಲಿದೆ.
ಇಲ್ಲಿ ವಿಡಿಯೋ ಇದೆ ಕ್ಲಿಕ್ ಮಾಡಿ 👇
ಧಾರವಾಡದ ಕೆ ಇ ಬೋರ್ಡ್ಸ್ ಶಾಲೆಯ ಆವರಣದಿಂದ ಆರಂಭವಾಗುವ ಪಥಸಂಚಲನ ಜ್ಯುಬಿಲಿ ಸರ್ಕಲ್ ಮೂಲಕ ಹಾಯ್ದು, ಕರ್ನಾಟಕ ಕಾಲೇಜು ಮೈದಾನಕ್ಕೆ ಬಂದು ತಲುಪಲಿದೆ.
ಆರ್ ಎಸ್ ಎಸ್ ಪಥಸಂಚಲನ ಹಾಯ್ದು ಹೋಗುವ ಮಾರ್ಗದಲ್ಲಿ ಪೊಲೀಸರು ರೂಟ್ ಮಾರ್ಚ ನಡೆಸಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದಾರೆ.

ಗಣವೇಶಧಾರಿಗಳ ಪಥ ಸಂಚಲನ ಹಿನ್ನೆಲೆಯಲ್ಲಿ ನಾಳೆ ಧಾರವಾಡದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಜೀರೋ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದಾರೆ.
Author: Karnataka Files
Post Views: 3





