Download Our App

Follow us

Home » ಪ್ರಯಾಣ » ಧಾರವಾಡ ಹತ್ತಿರ ಭೀಕರ ಅಪಘಾತ. ಗದಗ ಮೂಲದ ಇಬ್ಬರ ಸಾವು

ಧಾರವಾಡ ಹತ್ತಿರ ಭೀಕರ ಅಪಘಾತ. ಗದಗ ಮೂಲದ ಇಬ್ಬರ ಸಾವು

ಧಾರವಾಡ ಬಳಿ ಇಂದು ಬೆಳಗಿನ ಜಾವ ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಹಾಂತಮ್ಮ ತುಪ್ಪದ, ಸುರೇಶ ತುಪ್ಪದ ಸಾವನ್ನಪ್ಪಿದ್ದಾರೆ. ಇವರು ಗದಗಿನ ಹುಡ್ಕೋ ಕಾಲನಿಯವರು ಎನ್ನಲಾಗಿದೆ.

ಗರಗ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಕ್ರೂಸರ್ ವಾಹನದ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಅಪಘಾತದಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ. ಕ್ರೂಸರ್  ನಲ್ಲಿದ್ದವರು ಕೊಲ್ಲಾಪುರ ಮಹಾಲಕ್ಷಿ ದರ್ಶನ ಪಡೆದು ಗದಗಿಗೆ ಮರಳುತ್ತಿದ್ದರು.    ಸ್ಥಳಕ್ಕೆ ಗರಗ ಪೊಲೀಸರು ಭೇಟಿ ನೀಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!